ವಿಟ್ಲ: ಹೆಸರಾಂತ ವೈದಿಕ ವಿದ್ವಾಂಸ ಬ್ರಹ್ಮಶ್ರೀ ವೇದಮೂರ್ತಿ ಮಣಿಮುಂಡ ಶಂಕರ ಉಪಾಧ್ಯಾಯರು ಇಂದು ಬೆಳಗ್ಗೆ (ಫೆ.8) ಸ್ವಘರಹದಲ್ಲಿ ನಿಧನ ಹೊಂದಿದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು. ಅಲ್ಪ ಕಾಲದ ವಯೋಸಹಜ ಅಸೌಖ್ಯದಿಂದ ಅವರು ನಿಧನರಾದರು. ಪತ್ನಿ ಈಗಾಗಲೇ ಕಾಲವಾಗಿದ್ದಾರೆ. ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ವೇದಗಳ ಅಧ್ಯಯನ, ಅಧ್ಯಾಪನ, ಪರಂಪರೆಯ ಪೋಷಣೆ, ಪಾಲನೆ ಮತ್ತು ಅಪೂರ್ವ ನಿಸ್ಪಹತೆಗಳ ಮಣಿಮುಂಡ ಪೌರೋಹಿತ್ಯ ಮನೆತನದ ಪ್ರಸಿದ್ಧ ವೇದ ವಿದ್ವಾಂಸ ವೇ.ಮೂ. ಕೃಷ್ಣ ಉಪಾಧ್ಯಾಯ ಹಾಗೂ ಸರಸ್ವತಿ ದಂಪತಿ ಪುತ್ರರಾದ ಅವರು ತಂದೆಯವರಿಂದಲೇ ಶ್ರೀಕೃಷ್ಣ ಯಜುರ್ವೇದದ ಸಾಂಗ ಅಧ್ಯಯನ, ಪೂರ್ವಾಪರ ಪ್ರಯೋಗ ಪಾಠ, ಸಹೋದರನಿಂದಲೇ ಸಂಸ್ಕೃತ ಅಧ್ಯಯನ ನಡೆಸಿದವರು.
ಕಿಳಿಂಗಾರಿನ ವಸಿಷ್ಠ ಪ್ರಶಸ್ತಿ ಪೀಠದಿಂದ ಪುರಸ್ಕಾರ, ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದಿಂದ ಪುರಸ್ಕಾರ, ಸುಳ್ಯ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಿಂದ ವೇದ- ಸಾಧಕ ಪ್ರಶಸ್ತಿ ಹೀಗೆ ಹಲವಾರು ಸಂಘ- ಸಂಸ್ಥೆಗಳಿಂದ, ಶಿಷ್ಯವೃಂದದವರಿಂದ ಗೌರವಾರ್ಪಣೆಗಳನ್ನು ಪಡೆದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق