ತಬಲಾ ವಾದಕ ದಿನೇಶ್ ಪ್ರಸಾದ್ ಮಿಶ್ರಾ ಸ್ಕಂದ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗ ಹೃದಯಾಘಾತವಾಗಿ ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಿನೇಶ್ ಪ್ರಸಾದ್ ಮಿಶ್ರಾ ಸಂಗೀತ ಪ್ರದರ್ಶನ ನೀಡುತ್ತಿದ್ದರು.
ತಬಲಾ ವಾದಕರಾಗಿ ಖ್ಯಾತಿ ಪಡೆದಿದ್ದ ದಿನೇಶ್ ಪ್ರಸಾದ್ ಮಿಶ್ರಾ ಬ್ಯಾರೆಲ್ ಮಾದರಿ ಹಾಗೂ ಎರಡು ತಲೆ ಸೇರಿದಂತೆ ವಿವಿಧ ಮಾದರಿಯ ತಬಲಾಗಳನ್ನು ಬಾರಿಸುವುದರಲ್ಲಿ ನಿಪುಣರಾಗಿದ್ದರು.
ಸೋಮವಾರ ಸಂಜೆ ಸಂಗೀತ ಕಾರ್ಯಕ್ರಮ ನೀಡುವಾಗ ವೇದಿಕೆಯಲ್ಲೇ ದಿನೇಶ್ ಪ್ರಸಾದ್ ಮಿಶ್ರಾ ಕುಸಿದು ಬಿದ್ದರು.
ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯ ಇದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ದಾರಿ ಮಧ್ಯೆದಲ್ಲೇ ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Post a Comment