ಸುಳ್ಯ: ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು 4 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ದಿನಾಂಕ 26-2-2023 ಕ್ಕೆ ಭಾನುವಾರ ದಿನ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಸಂಗೀತ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯಲ್ಲಿ ಹಾಡಲು ಆಸಕ್ತಿ ಇರುವವರು ತಮ್ಮ ಹೆಸರು ನೋಂದಾಯಿಸಬಹುದಾಗಿದೆ. ಯಾವುದೇ ಗೀತೆಯನ್ನು ಪೂರ್ಣವಾಗಿ ಹಾಡಲು ಅವಕಾಶ ಮಾಡಿಕೊಡಲಾಗುವದು.
ಕರೋಕೆ ಸಂಗೀತದಲ್ಲಿ ಹಾಡಬೇಕು. ಸಂಗೀತ ಇಲ್ಲದೆಯೂ ಹಾಡಬಹುದು. ಕಿರಿಯ ಗಾಯಕರು ಮತ್ತು ಹಿರಿಯ ಗಾಯಕರು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಒಬ್ಬರಿಗೆ ಪ್ರವೇಶ ಶುಲ್ಕ 300 ಇರುತ್ತದೆ . ಭಾಗವಹಿಸಿದ ಪ್ರತಿಯೊಬ್ಬರಿಗೂ ಆಕರ್ಷಕ ಮೊಮೆಂಟೊ ಮತ್ತು ಪ್ರಶಂಸನಾ ಪತ್ರ ನೀಡಿ ಸತ್ಕರಿಸಲಾಗುವದು.
ಅಂದು ಫೈನಲ್ ಸ್ಪರ್ಧೆಯ 6 ಜನ ಗಾಯಕರನ್ನು ನಿರ್ಣಾಯಕರು ಆಯ್ಕೆ ಮಾಡುತ್ತಾರೆ. ಫೈನಲ್ ಸಂಗೀತ ಸ್ಪರ್ಧೆಯನ್ನು ಅದೇ ಸಭಾಂಗಣದಲ್ಲಿ ದಿನಾಂಕ 5-3-2023 ರಂದು ಚಂದನ ಸಾಹಿತ್ಯ ವೇದಿಕೆ ವತಿಯಿಂದ ನಡೆಯುವ ರಾಜ್ಯಮಟ್ಟದ ಸಾಹಿತ್ಯ ಸಮಾರಂಭದಲ್ಲಿ ನಡೆಸಲಾಗುವದು.
ಒಂದು ವಿನ್ನರ್ ಎರಡು ರನ್ನರ್ ಹಾಗೂ 3 ಸಮಾಧಾನಕರ ಬಹುಮಾನಗಳನ್ನು ಬಹುಮಾನಿತರಿಗೆ ನೀಡಿ ಗೌರವಿಸಲಾಗುವದು.
ಅಲ್ಲದೇ ವಿನ್ನರ್ ಮತ್ತು ರನ್ನರ್ ಅವರಿಗೆ ಸಂಗೀತದ ಬಿರುದು ಘೋಷಿಸಲಾಗುವದು .
ಹೆಚ್ಚಿನ ಮಾಹಿತಿಗೆ 9845309239 ಈ ಸಂಖ್ಯೆಗೆ ಸಂಪರ್ಕಿಸಬೇಕೆಂದು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ತಿಳಿಸಿದ್ದಾರೆ .
إرسال تعليق