ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೀರುಮಾರ್ಗ- ಪಡುವಿನಲ್ಲಿ ಬಸ್‌ ತಂಗುದಾಣ: ಶಾಸಕ ಡಾ. ವೈ. ಭರತ್‌ ಶೆಟ್ಟಿ ಉದ್ಘಾಟನೆ

ನೀರುಮಾರ್ಗ- ಪಡುವಿನಲ್ಲಿ ಬಸ್‌ ತಂಗುದಾಣ: ಶಾಸಕ ಡಾ. ವೈ. ಭರತ್‌ ಶೆಟ್ಟಿ ಉದ್ಘಾಟನೆ

 


ಮಂಗಳೂರು: ಜೀವನದಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ನಾವು ಬೆಳೆದಾಗ ನಮ್ಮಲ್ಲಿ ಧನಾತ್ಮಕ ಮನಸ್ಥಿತಿ, ಚೈತನ್ಯ ಜಾಗೃತವಾಗುತ್ತದೆ. ಈ ನಿಟ್ಟಿನಲ್ಲಿ ಮಂಡಲ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿ. ಪಿ. ಕಾಂತಪ್ಪ ಪೂಜಾರಿ ಕುಟುಂಬ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು.


ನೀರುಮಾರ್ಗ ಹೊರವಲಯದ ಪಡುವಿನಲ್ಲಿ ದಿ. ವೀರಮ್ಮ ಮತ್ತು ಪಿ. ಕಾಂತಪ್ಪ ಪೂಜಾರಿ ಸ್ಮರಣಾರ್ಥ ನಿರ್ಮಿಸಲಾದ ನೂತನ ಬಸ್ ತಂಗುದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ರಾಜಕೀಯದಲ್ಲಿ ಹಿಂದಿನ ಸಂಕಷ್ಟ ಕಾಲದಲ್ಲಿ ಕಾಂತಪ್ಪ ಪೂಜಾರಿಯವರಂತಹ ಹಿರಿಯರು ಪರಿಶ್ರಮಪಟ್ಟು ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದ್ದೆವು. ಅಂತಹ ವ್ಯಕ್ತಿಗಳು ನಮಗೆ ಮಾದರಿಯಾಗಿದ್ದಾರೆ. ಅವರ ಸ್ಮರಣಾರ್ಥ ಕುಟುಂಬ ವರ್ಗ ಸುವ್ಯವಸ್ಥಿತ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.


ಮುಖ್ಯ ಅತಿಥಿಗಳಾಗಿ ಎಸ್‌ಆರ್‌ಆರ್ ಮಸಾಲ ಸಂಸ್ಥೆಯ ಮಾಲೀಕ ಶೈಲೇಂದ್ರ ವೈ. ಸುವರ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗೋಕುಲ್‌ದಾಸ್ ಶೆಟ್ಟಿ, ಬದಿನಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ  ಭಂಡಾರಿ ಮಜಲು, ವ್ಯವಸ್ಥಾಪನಾ ಸಮಿತಿ ಸದಸ್ಯ ಕೇಶವ ಪೂಜಾರಿ, ಶಶಿ ಕರಂದಾಡಿ, ಯುವವಾಹಿನಿ ಮಾಜಿ ಅಧ್ಯಕ್ಷ ಯಶವಂತ್ ಪೂಜಾರಿ, ಹಿರಿಯ ಪತ್ರಕರ್ತ ವಿಜಯ್ ಕೋಟ್ಯಾನ್ ಪಡು, ಗ್ರಾಮ ಪಂಚಾಯಿತಿ ಸದಸ್ಯರಾದ ಕಿಶೋರ್ ಕುಮಾರ್, ಸಚಿನ್ ಹೆಗ್ಡೆ ಹೊಸಮನೆ, ಹರೀಶ್ ಹೊಸಮನೆ, ಚೇತನ್ ನೀರುಮಾರ್ಗ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಯಶ್ವಿನ್ ಸತ್ತಿಕಲ್ಲು, ಕಾರ್ಯಕ್ರಮ ಸಂಯೋಜಕರಾದ ಬಾಲಕೃಷ್ಣ ಪಚ್ಚನಾಡಿ, ನಾಗೇಶ್ ಪಿಲ್ಚಂಡಿ, ಕೇಶವ ಪೂಜಾರಿ, ಶೈಲೇಶ್ ಕುಳೂರು, ದಿನಕರ್ ಅಬ್ಬೆಟ್ಟು, ತುಷಾರ್ ಸುರತ್ಕಲ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post