ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವರ್ಷದ ಫಿಪಾ ಆಟಗಾರ ಪ್ರಶಸ್ತಿ ಪಡೆದ ಲಿಯೋನೆಲ್ ಮೆಸ್ಸಿ

ವರ್ಷದ ಫಿಪಾ ಆಟಗಾರ ಪ್ರಶಸ್ತಿ ಪಡೆದ ಲಿಯೋನೆಲ್ ಮೆಸ್ಸಿ

 


ಕತಾರ್ ದೇಶದಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ ನಲ್ಲಿ ಅರ್ಜೆಂಟೀನಾ ಪರ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನ ಗೆದ್ದ ನಂತರ ಲಿಯೋನೆಲ್ ಮೆಸ್ಸಿ ಸೋಮವಾರದಂದು ವರ್ಷದ ಫಿಫಾ ಆಟಗಾರ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಇದು ಮೆಸ್ಸಿಯ ಎರಡನೇ ಫಿಫಾ ದಿ ಬೆಸ್ಟ್ ಅವಾರ್ಡ್ ಆಗಿದೆ.


35 ವರ್ಷದ ಫಾರ್ವರ್ಡ್ ಆಟಗಾರ ಮೆಸ್ಸಿ ವಿಶ್ವಕಪ್ ಫೈನಲ್‌ ನಲ್ಲಿ ಎರಡು ಗೋಲು ಗಳಿಸಿದರು, ಹೆಚ್ಚುವರಿ ಸಮಯದಲ್ಲಿ 3-3 ಅಂಕಗಳಿಂದ ಡ್ರಾಗೊಂಡ ನಂತರ ಅರ್ಜೆಂಟೀನಾ ಫ್ರಾನ್ಸ್ ವಿರುದ್ಧ ಪೆನಾಲ್ಟಿಯಲ್ಲಿ ಗೆದ್ದು ಬೀಗಿತು.


ಇನ್ನೂ ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನ ಸತತ ಎರಡನೇ ಬಾರಿಗೆ ಪಡೆದುಕೊಂಡಿದ್ದಾರೆ.


ಇದಕ್ಕೂ ಮೊದಲು, ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಾಲೋನಿ, ವಿಶ್ವಕಪ್ ವರೆಗೂ ತಮ್ಮ ತಂಡವನ್ನ ಪ್ರತಿನಿಧಿಸಿದ್ದಕ್ಕಾಗಿ FIFA ಪುರುಷರ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

0 Comments

Post a Comment

Post a Comment (0)

Previous Post Next Post