ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತೆಲುಗು ಚಿತ್ರರಂಗದ ಕಲಾ ತಪಸ್ವಿ ಎಂದೇ ಖ್ಯಾತಿ ಹೊಂದಿದ ಕೆ.ವಿಶ್ವನಾಥ್ ಇನ್ನಿಲ್ಲ

ತೆಲುಗು ಚಿತ್ರರಂಗದ ಕಲಾ ತಪಸ್ವಿ ಎಂದೇ ಖ್ಯಾತಿ ಹೊಂದಿದ ಕೆ.ವಿಶ್ವನಾಥ್ ಇನ್ನಿಲ್ಲ

 


ಹೈದರಾಬಾದ್: ಸ್ವಾತಿ ಮುತ್ಯಮ್, ಶಂಕರಾಭರಣಂ, ಸಾಗರ ಸಂಗಮಮ್ ಸೇರಿದಂತೆ ಹಲವು ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ ಇಹಲೋಕ ತ್ಯಜಿಸಿದ್ದಾರೆ.


ತೆಲುಗು ಚಿತ್ರರಂಗದಲ್ಲಿ ಕಲಾ ತಪಸ್ವಿ ಎಂದೇ ಕೆ.ವಿಶ್ವನಾಥ್ (92) ಪ್ರಖ್ಯಾತಿ ಹೊಂದಿದ್ದರು.


 ಹಲವು ದಿನಗಳಿಂದ ವಯೋ ಸಹಜ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 


ಸ್ವರಾಭಿಷೇಕಂ, ಠಾಗೂರ್, ಅತಡು, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ವಿಶ್ವನಾಥ್ ನಿರ್ದೇಶಕರಾಗಿ ಅಷ್ಟೇ ಅಲ್ಲದೇ ನಟರಾಗಿ, ಚಿತ್ರಕಥೆಗಾರರಾಗಿಯೂ ಛಾಪು ಮೂಡಿಸಿದ್ದರು. ಕೆ ವಿಶ್ವನಾಥ್ ಅವರು 5 ರಾಷ್ಟ್ರೀಯ ಸಿನಿಮಾ ಅವಾರ್ಡ್ ಗಳನ್ನು ಪಡೆದಿದ್ದು, ರಾಜ್ಯದ ನಂದಿ ಪ್ರಶಸ್ತಿಗೆ 7 ಬಾರಿ ಭಾಜನರಾಗಿದ್ದಾರೆ.


0 Comments

Post a Comment

Post a Comment (0)

Previous Post Next Post