ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಖಾಸಗಿ ಶಾಲೆಗಳಲ್ಲಿ ಶೇ.15 ರಷ್ಟು ಪ್ರವೇಶ ಶುಲ್ಕ ಏರಿಕೆಗೆ ನಿರ್ಧಾರ

ಖಾಸಗಿ ಶಾಲೆಗಳಲ್ಲಿ ಶೇ.15 ರಷ್ಟು ಪ್ರವೇಶ ಶುಲ್ಕ ಏರಿಕೆಗೆ ನಿರ್ಧಾರ

 


ಬೆಂಗಳೂರು : ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ಶಾಕ್, ಶೇ. 15 ರಷ್ಟು ಪ್ರವೇಶ ಶುಲ್ಕ ಏರಿಕೆಗೆ ಖಾಸಗಿ ಶಾಲೆಗಳು ನಿರ್ಧಾರ ಕೈಗೊಂಡಿವೆ.

ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಪ್ರಮುಖ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ಹೆಚ್ಚಿನ ಶುಲ್ಕ ಕಟ್ಟಬೇಕಾಗಿದೆ.

2023-24ನೇ ಸಾಲಿನಲ್ಲಿ ಖಾಸಗಿ ಶಾಲೆಗಳ ಪ್ರವೇಶ ಶುಲ್ಕವನ್ನು ಶೇ. 5 ರಿಂದ 15 ರಷ್ಟು ಹೆಚ್ಚಿಸಲು ಕ್ಯಾಮ್ಸ್ ಸೇರಿದಂತೆ ವಿವಿಧ ಖಾಸಗಿ ಶಾಲಾ ಸಂಘಟನೆಗಳು ನಿರ್ಧರಿಸಿವೆ.

ರಾಜ್ಯದಲ್ಲಿ ಸುಮಾರು 4 ಸಾವಿರ ಸದಸ್ಯ ಶಾಲೆಗಳನ್ನು ಹೊಂದಿರುವ ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಶೇ. 10 ರಿಂದ 15 ರಷ್ಟು ಪ್ರವೇಶ ಶುಲ್ಕವನ್ನು ಹೆಚ್ಚಿಸಲು ತನ್ನ ಸದಸ್ಯ ಶಾಲೆಗಳಿಗೆ ಸಲಹೆ ನೀಡಿದೆ ಎನ್ನಲಾಗಿದೆ.

0 Comments

Post a Comment

Post a Comment (0)

Previous Post Next Post