ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡುಗಳನ್ನು ರದ್ದುಪಡಿಸಲು ಫೆ. 25 ರವರೆಗೆ ಅಭಿಯಾನ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡುಗಳನ್ನು ರದ್ದುಪಡಿಸಲು ಫೆ. 25 ರವರೆಗೆ ಅಭಿಯಾನ

 


ಕೊಪ್ಪಳ : ಕಾರ್ಮಿಕ ಇಲಾಖೆಯಿಂದ ನಕಲಿ ದಾಖಲಾತಿ ಸೃಷ್ಠಿಸಿ ಗುರುತಿನ ಚೀಟಿ ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡುಗಳನ್ನು ರದ್ದುಪಡಿಸಲು ಫೆಬ್ರವರಿ 25 ರವರೆಗೆ ಬೋಗಸ್ ಕಾರ್ಡ್ ನೋಂದಣಿ ರದ್ಧತಿ ಅಭಿಯಾನ ಕೈಗೊಳ್ಳಲಾಗಿದೆ.


ನಕಲಿ ದಾಖಲಾತಿ ಸೃಷ್ಠಿಸಿ ಗುರುತಿನ ಚೀಟಿ ಪಡೆದಿರುವ ಫಲಾನುಭವಿಗಳು ಸ್ವ-ಇಚ್ಛೆಯಿಂದ ಮಂಡಳಿಗೆ ಗುರುತಿನ ಚೀಟಿಯನ್ನು ಹಿಂತಿರುಗಿಸಿದಿದ್ದಲ್ಲಿ ಮುಂದಿನ ಕಾನೂನು ಕ್ರಮವನ್ನು ಕೈಬಿಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ರವರು ಆದೇಶ ಹೊರಡಿಸಿದ್ದಾರೆ. 


ಈ ಹಿನ್ನೆಲೆ ಪರಿಶೀಲನೆಗೆ ಒಳಗಾದ ಫಲಾನುಭವಿಯು ನಕಲು ದಾಖಲಾತಿಯನ್ನು ಸೃಷ್ಠಿಸಿ ನೋಂದಣಿಯಾಗಿರುವುದು ಕಂಡುಬಂದಲ್ಲಿ, ಸರ್ಕಾರದ ಅಧಿಸೂಚನೆ 2022ರ ಆಗಸ್ಟ್ 18ರ ತಿದ್ದುಪಡಿ ನಿಯಮ-20(7)ರನ್ವಯ ಕಾರ್ಮಿಕರ ನೋಂದಣಾಧಿಕಾರಿಯು ತನ್ನ ಅಧಿಕಾರವನ್ನು ಚಲಾಯಿಸಿ, ಸೇವಾಸಿಂಧು ತಂತ್ರಾಂಶದಲ್ಲಿ ಅಂತಹ ಫಲಾನುಭವಿಯ ನೋಂದಣಿಯನ್ನು 'ಫ್ರೀಜ್' ಮಾಡುವುದು ಮತ್ತು ಆ ಫಲಾನುಭವಿಯ ವೈಯಕ್ತಿಕ ಕಡತದಲ್ಲೂ ರದ್ಧತಿಯನ್ನು ದಾಖಲಿಸುವುದಾಗಿದೆ.


ಅಭಿಯಾನ ಸಂದರ್ಭದಲ್ಲಿ ಬೋಗಸ್ ಫಲಾನುಭವಿಯು ಸ್ವ-ಇಚ್ಛೆಯಿಂದ ನಕಲು ನೋಂದಣಿಯನ್ನು ಒಪ್ಪಿಕೊಂಡು ಗುರುತಿನ ಚೀಟಿಯನ್ನು ಹಿಂದಿರುಗಿಸದಿದ್ದಲ್ಲಿ, ಅವರಿಂದ ಒಪ್ಪಿಗೆ ಪತ್ರವನ್ನು ಪಡೆದು ಅವರ ಮೇಲಿನ ಮುಂದಿನ ಕಾನೂನು ಕ್ರಮವನ್ನು ಕೈಬಿಡುವುದು ಮತ್ತು ನೋಂದಣಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಫ್ರೀಜ್/ ರದ್ದು ಮಾಡುವುದು ಮತ್ತು ಕಡತದಲ್ಲಿ ರದ್ದುಗೊಳಿಸುವುದು ಹಾಗೂ ಈಗಾಗಲೇ ಪಡೆದಿರುವ ವಿವಿಧ ಸೌಲಭ್ಯಗಳನ್ನು ವಸೂಲಿ ಮಾಡಲು ಕ್ರಮಕೈಗೊಳ್ಳುವುದು.


 ಅಭಿಯಾನದ ನಂತರವು ಸಂಬಂಧಪಟ್ಟ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರು ಅಥವಾ ನೋಂದಣಾಧಿಕಾರಿಯು ತಮ್ಮ ಕಾರ‍್ಯವ್ಯಾಪ್ತಿಯಲ್ಲಿ ಬೋಗಸ್ ಕಾರ್ಡುಗಳನ್ನು ಗುರುತಿಸಿ ರದ್ದುಗೊಳಿಸುವ ಕಾರ್ಯವನ್ನು ನಿರಂತರವಾಗಿ ನಿರ್ವಹಿಸುವರು. 


0 تعليقات

إرسال تعليق

Post a Comment (0)

أحدث أقدم