ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಟ್ವಾಳ: ಸಿದ್ದಕಟ್ಟೆ ಕುಡುಬಿ ಸಮುದಾಯ ಭವನ ನಾಳೆ ಲೋಕಾರ್ಪಣೆ

ಬಂಟ್ವಾಳ: ಸಿದ್ದಕಟ್ಟೆ ಕುಡುಬಿ ಸಮುದಾಯ ಭವನ ನಾಳೆ ಲೋಕಾರ್ಪಣೆ


ಬಂಟ್ವಾಳ: ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಊರ ಪರವೂರ ಹಾಗೂ ಕುಡುಬಿ ಸಮಾಜದ ವತಿಯಿಂದ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನ ಸಿದ್ದಕಟ್ಟೆ ಕೋರ್ಯಾರು ಎಂಬಲ್ಲಿ ನಿರ್ಮಿಸಲಾದ ಕುಡುಬಿ ಸಮುದಾಯ ಭವನವು ನಾಳೆ ಲೋಕಾರ್ಪಣೆಗೊಳ್ಳಲಿದೆ ಎಂದು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹೇಮಚಂದ್ರ ಗೌಡ ಸಿದ್ದಕಟ್ಟೆ,  ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಸಿದ್ಧಕಟ್ಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕುಡುಬಿ ಸಮುದಾಯ ಭವನವನ್ನು ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಮಾಡಲಿದ್ದಾರೆ. ಅನ್ನ ಛತ್ರದ ಉದ್ಘಾಟನೆಯನ್ನು ಇಂಧನ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಉದ್ಘಾಟನೆ ಮಾಡಲಿದ್ದಾರೆ. ಪಾಕಶಾಲೆಯ ಉದ್ಘಾಟನೆಯನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ಉದ್ಘಾಟನೆ ಮಾಡಲಿದ್ದಾರೆ.


ಸಭಾ ಕಾರ್ಯಕ್ರಮದ  ದೀಪ ಪ್ರಜ್ವಲನೆಯನ್ನು ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ, ಇವರು ವಹಿಸಲಿರುವರು.


ಗೌರವ ಉಪಸ್ಥಿತಿಯಾಗಿ ಶ್ರೀ ಕೃಷ್ಣ ಪ್ರಸಾದ್ ಅಸ್ರಣ್ಣರು ಶ್ರೀ ಕ್ಷೇತ್ರ ಪೂಂಜ, ಪಿ ಪ್ರಕಾಶ್ ಆಚಾರ್ಯ ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಪೂಂಜ, ಪ್ರಭಾಕರ್ ಐಗಳ್ ಅರ್ಚಕರು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಸಂಗಬೆಟ್ಟು, ಮುಖ್ಯ ಅತಿಥಿಗಳಾಗಿ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಬಿ ನಾಗರಾಜ ಶೆಟ್ಟಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ಶ್ರೀಮತಿ ಸುಲೋಚನ ಜಿ.ಕೆ ಭಟ್, ನಿರ್ದೇಶಕರು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಎಂ.ಕೆ. ನಾಯಕ್ ಅಧ್ಯಕ್ಷರು ರಾಜ್ಯ ಕುಡುಬಿ ಸಮಾಜ ಗೋಳಿಯಂಗಡಿ, ಕೃಷ್ಣ ಪ್ರಸಾದ್ ಕೊಂಪದವು, ಜನಾರ್ದನ ಗೌಡ ಮುಚ್ಚೂರು, ಎಂ.ತುಂಗಪ್ಪ ಬಂಗೇರ, ದೇವಪ್ಪ ಪೂಜಾರಿ ಬಾಳಿಕೆ, ಪ್ರಭಾಕರ್ ಪ್ರಭು, ಜಯಾನಂದ.ಪಿ, ವಿಜಯ ಗೌಡ ಶಿಬ್ರಿಕೆರೆ, ಅರ್ಕಕೀರ್ತಿ ಇಂದ್ರ, ರತ್ನಕುಮಾರ್ ಚೌಟ, ಶೇಖರಗೌಡ ಬಜಪೆ, ಶ್ರೀಮತಿ ಸುಜಾತ ಆರ್ ಪೂಜಾರಿ, ಸತೀಶ್ ಪೂಜಾರಿ ಅಲಕ್ಕೆ, ಪಿ.ಲೋಕೇಶ್ ಮಡಪಾಡಿ ಭಾಗವಹಿಸಲಿದ್ದಾರೆ.


ಅದೇ ದಿನ 56ನೇ ವರ್ಷದ ಭಜನಾಮಂಗಳೋತ್ಸವ, ಸಾರ್ವಜನಿಕ ಶ್ರೀ ಶನಿ ಪೂಜೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀ ದೇವಿ ಮಹಾತ್ಮೆಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಗುರಿಕಾರ ರಾದ ಗೋಪಾಲ ಗೌಡ , ಕರುಣಾಕರ ಮಂಚಕಲ್ಲು, ಡಾಕಯ ಗೌಡ ಕುಕ್ಕೇಡಿ , ಯಶೋಧರ ಕೋರ್ಯಾರು, ಗಣೇಶ ಕಣಿಯೂರು, ಗಂಗಾಧರ ಕುಕ್ಕೀಡಿ, ಜನಾರ್ಧನ ಕೊಡಂಗೆ ,  ಯೋಗೀಶ್ ಕಲ್ಪನೆ , ಜಯಂತ, ಉಮೇಶ ಮೊಯಿಲ್ಬೆಟ್ಟು ,ರತ್ನಾಕರ, ನಾರಾಯಣ ಕೊಡಂಗೆ, ಮತ್ತಿತರ ಪ್ರಮುಖರು  ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم