ಪಾಟ್ನಾ: ಬಿಹಾರದ ಖಗಾರಿಯಾದಲ್ಲಿ ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಯೊಬ್ಬರಿಂದ ವೈದ್ಯರೊಬ್ಬರು ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ ಸಾಹಿನಿ ಅವರು ವೈದ್ಯ ಕೃಷ್ಣ ಕುಮಾರ್ ಅವರಿಗೆ ಮಸಾಜ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋ ವೈರಲ್ ಆದ ಬಳಿಕ ಸಿವಿಲ್ ಸರ್ಜನ್ ಅವರು ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿದ್ದಾರೆ. ಈ ಇಬ್ಬರ ವೈದ್ಯರ ಕೆಲವು ಫೋಟೊಗಳು ಕೂಡಾ ವೈರಲ್ ಆಗುತ್ತಿದೆ.
ಇಬ್ಬರೂ ವಿವಾಹಿತರಾಗಿದ್ದು, ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ವರದಿಯಾಗಿದೆ. ವೈರಲ್ ವೀಡಿಯೋದಲ್ಲಿ, ಇಬ್ಬರನ್ನೂ ಪರಸ್ಪರ ಹತ್ತಿರವಾಗಿರುವುದು ಕಾಣಬಹುದಾಗಿದೆ.
ಮಾಹಿತಿಯ ಪ್ರಕಾರ, ವಿಡಿಯೋ ವೈರಲ್ ಆಗಿದ್ದರಿಂದ ಪಿಎಚ್‌ಸಿ ಪ್ರಭಾರಿ ತಲೆಮರೆಸಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಮತ್ತು ಫೋಟೋಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ತೆಗೆಯಲಾಗಿದೆ ಎನ್ನಲಾಗಿದೆ.
ಇಬ್ಬರ ಅನೇಕ ಚಿತ್ರಗಳು ವೈರಲ್ ಆಗಿದ್ದು, ಇದರಲ್ಲಿ ಇಬ್ಬರೂ ಅನ್ಯೋನ್ಯತೆಯಿಂದ ಕಾಣಿಸಿಕೊಂಡಿದ್ದಾರೆ. ಮಸಾಜ್ ವೀಡಿಯೊದಲ್ಲಿ, ಮಹಿಳಾ ಅಧಿಕಾರಿ ವೀಡಿಯೊ ಮಾಡಬೇಡಿ ಎಂದು ಹೇಳುತ್ತಿದ್ದಾರೆ, ಆದರೆ ವೈದ್ಯ ವಿಡಿಯೋ ಮಾಡುವುದನ್ನು ಮುಂದುವರೆಸಿದರು.
Post a Comment