ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 14 ತಿಂಗಳ ಮಗುವಿನ ಕಣ್ಣು ದಾನ ಮಾಡಿದ ಪಾಲಕರು

14 ತಿಂಗಳ ಮಗುವಿನ ಕಣ್ಣು ದಾನ ಮಾಡಿದ ಪಾಲಕರು

 


ರಾಯಚೂರು: 14 ತಿಂಗಳ ಮಗು ಕಳೆದುಕೊಂಡ ನೋವಿನಲ್ಲೂ ಆತನ ಕಣ್ಣುಗಳನ್ನು ದಾನ ಮಾಡಿ ಹಲವರ ಬದುಕಿಗೆ ಬೆಳಕು ನೀಡಿ ಮಾನವೀಯತೆ ಮೆರೆದಿದ್ದಾರೆ. 


ಗೆಜ್ಜಲಗಟ್ಟಾ ಗ್ರಾಮದ ನಿವಾಸಿ, ಗಣಿ ಕಂಪನಿ ನೌಕರ ಅಮರೇಗೌಡ ಕಾಮರೆಡ್ಡಿ ಮತ್ತು ವಾಣಿ ದಂಪತಿಯು ತಮ್ಮ ಮೂರನೇ ಪುತ್ರ 14 ತಿಂಗಳ ಬಸವಪ್ರಭುವಿನ ಎರಡೂ ಕಣ್ಣುಗಳನ್ನು ರಾಯಚೂರಿನ ನವೋದಯ ಮೆಡಿಕಲ್​ ಕಾಲೇಜಿಗೆ ದಾನ ಮಾಡಿದರು.


ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಗು ಬಸವಪ್ರಭುಗೆ ರಾಯಚೂರು, ಬೆಳಗಾವಿ, ಬೆಂಗಳೂರು ಮತ್ತಿತರ ಕಡೆ ಪಾಲಕರು ಚಿಕಿತ್ಸೆ ಕೊಡಿಸಿದ್ದರು.  ಚಿಕಿತ್ಸೆ ಫಲಿಸದೆ ಎರಡು ದಿನಗಳ ಹಿಂದೆ ಮಗು ಮೃತಪಟ್ಟಿದೆ. 


ಈ ಬಗ್ಗೆ ಅಮರೇಗೌಡ ಕಾಮರೆಡ್ಡಿ ಮತ್ತು ವಾಣಿ, 'ನೇತ್ರದಾನಕ್ಕೆ ನಮಗೆ ಯಾರೂ ಸ್ಫೂರ್ತಿ ನೀಡಿಲ್ಲ. ಮೊದಲನೇ ಮಗು ತೀರಿದಾಗ ನಿಗದಿತ ಸಮಯದೊಳಗೆ ಅಂಗಾಂಗ ಮತ್ತು ನೇತ್ರದಾನ ಮಾಡಲು ಸಾಧ್ಯವಾಗಲಿಲ್ಲ. ಬಸವಪ್ರಭು ಮರಣ ಹೊಂದಿದ ತಕ್ಷಣವೇ ಅಂಗಾಗ ಸಹಿತ ನೇತ್ರದಾನ ಮಾಡಲು ಸಿದ್ಧರಾದೆವು. ಆದರೆ, ನಮಗೆ ಸರಿಯಾದ ಮಾಹಿತಿ ಸಿಗದ ಕಾರಣ ನೇತ್ರದಾನವೊಂದನ್ನೇ ಮಾಡಿದ್ದೇವೆ' ಎನ್ನುತ್ತಾ ಭಾವುಕರಾದರು.

0 تعليقات

إرسال تعليق

Post a Comment (0)

أحدث أقدم