ಮಂಗಳೂರು:ನಗರದ ಮಣಪ್ಪುರಂ ಫೈನಾನ್ಸ್‌ನ ಉದ್ಯೋಗಿಯಾಗಿದ್ದ ಯುವತಿ ನಾಪತ್ತೆಯಾದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಕ್ಷ ಎಂಬವರ ಪುತ್ರಿ ಶಿವಾನಿ (20) ಕಾಣೆಯಾದ ಯುವತಿ. ಈಕೆ ಜ.16ರಂದು ಬೆಳಗ್ಗೆ 7ಕ್ಕೆ ಕೆಲಸಕ್ಕೆ ತೆರಳಿದ್ದು, ಸಂಜೆ 6 ಗಂಟೆಯಾದರೂ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಸ್ಥೆಯ ಸಿಬ್ಬಂದಿಯವರಲ್ಲಿ ವಿಚಾರಿಸಿದಾಗಲೂ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
5.6 ಅಡಿ ಎತ್ತರದ, ಬಿಳಿ ಮೈಬಣ್ಣದ, ದಪ್ಪಮುಖದ, ಸಾಧಾರಣ ಮೈಕಟ್ಟಿನ ಈಕೆ ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ.
ಮನೆಯಿಂದ ಹೊರಟು ಹೋದಾಗ ಹಸಿರು ಬಣ್ಣದ ಟಾಪ್ ಹಾಗೂ ಗೋಲ್ಡನ್ ಕಲರ್ ಪ್ಯಾಂಟ್ ಧರಿಸಿರುತ್ತಾರೆ. ಈಕೆಯನ್ನು ಕಂಡವರು ಸುರತ್ಕಲ್ ಠಾಣೆ (0824-2220540, 9480805360, 9480802345) ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ (0824-2220800) ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.
إرسال تعليق