ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾರಂಪಾಡಿ ಉಮಾಮಹೇಶ್ವರ ದೇವಸ್ಥಾದ ಜಾತ್ರೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ

ನಾರಂಪಾಡಿ ಉಮಾಮಹೇಶ್ವರ ದೇವಸ್ಥಾದ ಜಾತ್ರೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ


ಕಾಸರಗೋಡು: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವರ ಜಾತ್ರಾ ಮಹೋತ್ಸವವು ಜ.29ರಂದು ಪ್ರಾರಂಭವಾಗಿದ್ದು, ಹಲವಾರು ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಫೆ.02 ರಂದು ಆರಾಟು ಮಹೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.


ಈ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ.30ರಂದು ರಾತ್ರಿ 9.00 ರಿಂದ ಸುಮಾರು ಎರಡೂವರೆ ಘಂಟೆಗಳ ಕಾಲ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಹಲವಾರು ಭಕ್ತಾಭಿಮಾನಿಗಳ ಹಾಗೂ ಕಲಾಭಿಮಾನಿಗಳ ಸಮ್ಮುಖದಲ್ಲಿ ಬಹಳ ವೈವಿಧ್ಯಮಯವಾಗಿ ಜರುಗಿತು. ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ವಾಣಿಶ್ರೀ ಕಾಸರಗೋಡು ಇವರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.


ಸಂಸ್ಥೆಯ ಕಾರ್ಯದರ್ಶಿಯವರಾದ ಗುರುರಾಜ್ ಕಾಸರಗೋಡು, ಸನುಷಾ ಸುನಿಲ್, ಅಹನಾ ಎಸ್ ರಾವ್, ಹರೀಶ್ ಪಂಜಿಕಲ್ಲು, ಸನುಷ ಸುಧಾಕರನ್, ತನ್ವಿ ಶೆಟ್ಟಿ, ಭಾಸ್ಕರ್ ಅಡೂರ್, ಪ್ರಜನ್ಯ ಪ್ರವೀಣ್, ಉಷಾ ಸುಧಾಕರನ್, ವಿಷ್ಣು ಸುಧಾಕರನ್ ಮುಂತಾದ ಕಲಾವಿದರು ಭಾಗವಿಸಿದರು. ಸಂಸ್ಥೆಯ ವತಿಯಿಂದ ಎಲ್ಲಾ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಕೋಶಾಧಿಕಾರಿ ಡಾ. ವೆಂಕಟ ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ನಂತರ ದೇವಸ್ಥಾನದ ಆಡಳಿತ ವರ್ಗದವರಾದ ಅಧ್ಯಕ್ಷರು ತಲೇಖ ಸುಬ್ರಮಣ್ಯ ಭಟ್, ಕಾರ್ಯದರ್ಶಿ ಬಾಲಕೃಷ್ಣ ಮಾಸ್ಟ್ರು ನಾರoಪಾಡಿ ಹಾಗೂ ಕೋಶಾಧಿಕಾರಿ ಸೀತಾರಾಮ್ ಕುಂಜಾತ್ತಾಯ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವರ ಪ್ರಸಾದ ನೀಡಿ ಸಂಸ್ಥೆಯವರನ್ನು ಗೌರವಿಸಿದರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم