ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಕ್ಕರ್ ಬಾಂಬ್ ಸ್ಫೋಟ ರಿಕ್ಷಾ ಚಾಲಕನ ಮನೆಗೆ ಶಾಸಕ ಭೇಟಿ

ಕುಕ್ಕರ್ ಬಾಂಬ್ ಸ್ಫೋಟ ರಿಕ್ಷಾ ಚಾಲಕನ ಮನೆಗೆ ಶಾಸಕ ಭೇಟಿ

 


ಮಂಗಳೂರು: ಪುರುಷೋತ್ತಮ ಪೂಜಾರಿ ಮನೆಗೆ ಶಾಸಕ ಕಾಮತ್ ಭೇಟಿ ವಾರದೊಳಗೆ ಹೊಸ ರಿಕ್ಷಾ, 5 ಲಕ್ಷ ಬಿಜೆಪಿಯಿಂದ ನೀಡುವ ಭರವಸೆ.


ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಾಯಗೊಂಡು ಕಳೆದ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಮನೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು.


ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋರಿಕ್ಷಾ ನೀಡುವುದಾಗಿ ಶಾಸಕರು ಭರವಸೆ ನೀಡಿದರು ಎಆರ್‌ಟಿಓ ಸ್ಥಳಕ್ಕೆ ಕರೆಯಿಸಿ ಪರ್ಮಿಟ್ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದರು ಒಂದು ವಾರದೊಳಗೆ ಹೊಸ ರಿಕ್ಷಾ ದಾಖಲೆ ಸಮೇತ ನೀಡುವ ವ್ಯವಸ್ಥೆ ಆಗುವಂತೆ ಸೂಚಿಸಿದರು .


ಆಟೋರಿಕ್ಷದ ವೆಚ್ಚ ತಾನೇ ಪಾವತಿಸುವುದಾಗಿ ಶಾಸಕರು ತಿಳಿಸಿದರು. ಹೊಸ ಆಟೋ ಜೊತೆಗೆ ಬಿಜೆಪಿ ವತಿಯಿಂದ 5 ಲಕ್ಷ ರೂಪಾಯಿ ನೀಡಲಾಗುವುದು , ಸರಕಾರದಿಂದ ಬರಬೇಕಾದ ಪರಿಹಾರವೂ ಶೀಘ್ರ ಬರುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

0 تعليقات

إرسال تعليق

Post a Comment (0)

أحدث أقدم