ಬೆಂಗಳೂರು: ದೆಹಲಿಗೆ ಹೋಗಬೇಕಿದ್ದ ವಿಮಾನವೊಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಲ್ಲೇ ಬಿಟ್ಟು ಹೊರಟಿರುವ ಘಟನೆ ವರದಿಯಾಗಿದೆ.
ಈ ಬಗ್ಗೆ @GoFirstairways ವಿಮಾನಯಾನ ಸಂಸ್ಥೆಯನ್ನು ಟ್ಯಾಗ್ ಮಾಡಿರುವ ಟ್ವಿಟರಿಗರು, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ, ಬೆಂಗಳೂರಿನಿಂದ ದೆಹಲಿಗೆ ಜಿ8 116 ವಿಮಾನವು ಬೆಳಿಗ್ಗೆ 6.30 ರ ಸುಮಾರಿಗೆ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಹೊರಟಿತು ಎಂದು ಆರೋಪಿಸಿದ್ದಾರೆ.
ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ, ಇದೊಂದು ಭಯಾನಕ ಅನುಭವ'' ಎಂದು ಶ್ರೇಯಾ ಸಿನ್ಹಾ ಎಂಬ ಪ್ರಯಾಣಿಕರೊಬ್ಬರು ಟ್ವಿಟರ್ ನಲ್ಲಿ ಬರೆದು ಕೊಂಡಿದ್ದಾರೆ.
إرسال تعليق