ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಪ್ಪಿನಂಗಡಿ; ಸ್ವಯಂ ಸೇವಾ ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಉಪ್ಪಿನಂಗಡಿ; ಸ್ವಯಂ ಸೇವಾ ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

 


ಉಪ್ಪಿನಂಗಡಿ : ಗೃಹ ರಕ್ಷಕರ ಘಟಕದಲ್ಲಿ ಖಾಲಿ ಇರುವ ಪುರುಷರ ಸ್ವಯಂ ಸೇವಾ ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಉಪ್ಪಿನಂಗಡಿ ಸಮೀಪದ ಆಸುಪಾಸಿನ ಹುಡುಗರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 19 ವರ್ಷ ಮೇಲ್ಪಟ್ಟವರಾಗಿರಬೇಕಾಗಿದ್ದು, ಎಸೆಸ್ಸೆಲ್ಸಿ ಪಾಸಾಗಿರಬೇಕು.

168 ಸೆಂ.ಮೀ. ಎತ್ತರ ಹಾಗೂ ಕನಿಷ್ಠ 50 ಕೆ.ಜಿ ತೂಕವನ್ನು ಹೊಂದಿರಬೇಕು.

ಯಾವುದೇ ಅಂಗ ವೈಪಲ್ಯ ಇರಬಾರದು. ಸ್ವಯಂ ಆಸಕ್ತಿ ಇರುವವರಿಗೆ ಆದ್ಯತೆ ಇದ್ದು, ಉದ್ಯೋಗದಲ್ಲಿರುವವರಿಗೆ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ಅವಕಾಶವಿದೆ.

ಸರಕಾರ ನಿಗದಿ ಪಡಿಸಿದ ಅರ್ಜಿಯನ್ನು 1/1/2023 ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಉಪ್ಪಿನಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಮೀಪವಿರುವ ಅಂಗನವಾಡಿ ಬಳಿಯ ಘಟಕದ ಕಚೇರಿಯಿಂದ ಪಡೆದುಕೊಂಡು, ಭರ್ತಿ ಮಾಡಿ ನೀಡಬೇಕು.

ಹೆಚ್ಚಿನ ಮಾಹಿತಿಗೆ 8095642480 ನ್ನು ಸಂಪರ್ಕಿಸ ಬಹುದು.

0 Comments

Post a Comment

Post a Comment (0)

Previous Post Next Post