ಕೇರಳ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವಾರು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ.
ಈ ಮದುವೆ ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ. ವಿಡಿಯೋದಲ್ಲಿ ಮದುಮಗಳು ಖುಷಿ ಖುಷಿಯಿಂದ ಭರ್ಜರಿಯಾಗಿ ಚೆಂಡೆ ಬಾರಿಸಿದ್ದಾಳೆ.
ಕೇರಳದ ವಧು ತನ್ನ ಮದುವೆಯ ದಿನದಂದು ವೇದಿಕೆಗೆ ಏರುವ ಮೊದಲು ಶಿಂಕಾರಿ ಮೇಳಂ ಕಲಾವಿದರೊಂದಿಗೆ ಚೆಂಡೆ (ತಾಳವಾದ್ಯ) ಬಾರಿಸುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾಳೆ.
ಕೇರಳದ ಸಾಂಪ್ರದಾಯಿಕ ಆರ್ಕೆಸ್ಟ್ರಾ ಎಂದೇ ಕರೆಯಲ್ಪಡುವ ಚೆಂಡೆ ಮೇಳವನ್ನು ಸಾಮಾನ್ಯವಾಗಿ ರಾಜ್ಯದಲ್ಲಿ ಅದ್ಧೂರಿ ವಿವಾಹಗಳಲ್ಲಿ ಕಾಣಬಹುದು.
ಆದರೆ ತನ್ನ ಮದುವೆಯಲ್ಲಿ ಸ್ವತಃ ಚೆಂಡೆ ನುಡಿಸುವ ಮೂಲಕ ವಧು ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾಳೆ.
إرسال تعليق