ಪುಣೆ: ಮಹಾರಾಷ್ಟ್ರದ ಬಿಜೆಪಿ ಶಾಸಕ ಜಯಕುಮಾರ್ ಗೋರ್ ಹಾಗೂ ಇತರ ಮೂವರು ಪ್ರಯಾಣಿಸುತ್ತಿದ್ದ ಪ್ರಯಾಣಿಸುತ್ತಿದ್ದ ಸ್ಪೋಟ್ರ್ಸ್ ಯುಟಿಲಿಟಿ ವೆಹಿಕಲ್ (ಎಸ್‍ಯುವಿ) ಫಾಲ್ತಾನ್ ಬಳಿಯ ಸೇತುವೆಯಿಂದ ಹಳ್ಳಕ್ಕೆ ಬಿದಿದ್ದು ಎಲ್ಲರೂ ಗಾಯಗೊಂಡಿದ್ದಾರೆ.
ಶನಿವಾರ ನಸುಕಿನ ವೇಳೆ ಸತಾರಾ ಜಿಲ್ಲೆ ಲೋನಾಂಡ್-ಫಾಲ್ಟನ್ ರಸ್ತೆಯಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸೇತುವೆಯಿಂದ ಕನಿಷ್ಠ 30 ಅಡಿ ಆಳದ ಹಳ್ಳಕ್ಕೆ ಬಿದ್ದಿದೆ. ಅಪಘಾತದಲ್ಲಿ ಶಾಸಕ ಗೋರ್, ಅವರ ಅಂಗರಕ್ಷಕ ಮತ್ತು ಚಾಲಕ ಗಾಯಗೊಂಡಿದ್ದಾರೆ.
ಗೋರ್ ಅವರನ್ನು ಪುಣೆ ಮೂಲದ ರೂಬಿ ಹಾಲ್ ಕ್ಲಿನಿಕ್‍ಗೆ ದಾಖಲಿಸಲಾಗಿದೆ, ಇತರ ಗಾಯಾಳುಗಳು ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ಕಾರು ಬಂಗಂಗಾ ನದಿಯ ಸೇತುವೆಯ ತಡೆಗೋಡೆಯನ್ನು ಭೇದಿಸಿ ನಂತರ ಕಂದಕಕ್ಕೆ ಬಿದ್ದಿದೆ. ರೂಬಿ ಹಾಲ್ ಕ್ಲಿನಿಕ್‍ನ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥ ಡಾ.ಕಪಿಲ್ ಜಿರ್ಪೆ ಮಾತನಾಡಿ, ಬೆಳಿಗ್ಗೆ 6 ಗಂಟೆ ಸುಮಾರಿಗೆ ಶಾಸಕ ಗೋರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯಕೀಯ ತಂಡ ತಕ್ಷಣವೇ ಚಿಕಿತ್ಸೆ ಆರಂಭಿಸಿದೆ. ಅದೃಷ್ಟವಶಾತ್ ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ.
إرسال تعليق