ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಹುಮುಖ ಪ್ರತಿಭೆ ಕು.ದೀಪಶ್ರೀ ಪುತ್ತೂರು

ಬಹುಮುಖ ಪ್ರತಿಭೆ ಕು.ದೀಪಶ್ರೀ ಪುತ್ತೂರು

 




ನಮ್ಮ ಯುವಕ-ಯುವತಿಯರು ರಾಷ್ಟ್ರದ ಸಂಪತ್ತು. ಶಿಕ್ಷಣ,ಕಲೆ,ಸಾಹಿತ್ಯ,ಕ್ರೀಡೆ,ಸೈನಿಕರು, ವೈದ್ಯರು,ವಿಜ್ಞಾನಿಗಳು,ಶಿಕ್ಷಕರು... ಸಮಾಜಸೇವೆ... ಮೊದಲಾದ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆಸರು ಮಾಡುತ್ತಿರುವುದನ್ನು ನಾವು ಗಮನಿಸುತ್ತೇವೆ.

ಅವರಿಗೆ ಸರಿಯಾದ ವೇದಿಕೆ ನೀಡಿ ಪ್ರೋತ್ಸಾಹಿಸುವುದು ಸಮಾಜದ ಎಲ್ಲರ ಕರ್ತವ್ಯವಾಗಿದೆ.
ಇಂದು ಪ್ರತಿಭೆ-ಸಾಧನೆಗಳಿಂದ ಎಲ್ಲರ ಗಮನಸೆಳೆಯುತ್ತಿರುವ ಅನೇಕ ಯುವ ಜನತೆಯನ್ನು ನಾವು ಗಮನಿಸಬಹುದು. ಅವರಲ್ಲೊಬ್ಬರು ಸಂತ ಫಿಲೋಮಿನಾ ಕಾಲೇಜಿನ ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿ, ಅನೇಕ ಪ್ರತಿಭೆಗಳ ಸಂಗಮ ಕು.ದೀಪಶ್ರೀ ಪುತ್ತೂರು.

ಮೂಲತ: ಮಂಗಳೂರಿನವರಾದ ದೀಪಶ್ರೀ ಯವರು ನವೀನ್ ಕುಮಾರ್ ಆಚಾರ್ಯ, ಶ್ರೀಮತಿ ಶ್ವೇತಾ ಎನ್.ಆಚಾರ್ಯ ಇವರ ಪುತ್ರಿ. ತನ್ನ ಪ್ರಾಥಮಿಕ  ಶಿಕ್ಷಣ  ಆರನೇ ತರಗತಿವರೆಗೆ ಮಂಗಳೂರಿನ ಕೆನರಾ ಸ್ಕೂಲ್, ನಂತರ ಏಳನೇ ತರಗತಿ ಶಿಕ್ಷಣವನ್ನು ಕೆನರಾ  ಹೆಣ್ಣುಮಕ್ಕಳ ಶಾಲೆ ಡೊಂಗರಕೇರಿ ವಿದ್ಯಾಲಯದಲ್ಲಿ ಪಡೆದ ದೀಪಶ್ರೀಯವರು , ಪ್ರೌಢಶಾಲಾ ಶಿಕ್ಷಣವನ್ನು ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿ  ಮುಂದೆ  ಪದವಿ ಪೂರ್ವ ಶಿಕ್ಷಣವನ್ನು ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿದರು.

ಇದೀಗ ಪುತ್ತೂರಿನ ಸಂತಫಿಲೋಮಿನಾ ಕಾಲೇಜಿನಲ್ಲಿ ತಮ್ಮ ಪದವಿ ವ್ಯಾಸಂಗವನ್ನು ಮುಂದುವರಿಸುತ್ತಿದ್ದಾರೆ.

ತನ್ನ ಬಾಲ್ಯದಿಂದಲೇ ಕಲೆ,ಸಾಹಿತ್ಯ,ಶಿಕ್ಷಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ಲಾಕ್ ಡೌನ್ ಸಮಯದಲ್ಲಿ ಹೊಲಿಗೆ, ಚಿತ್ರಕಲೆ, ಕ್ರಾಫ್ಟ್, ಸಾಹಿತ್ಯ ಕಲೆಯನ್ನು ಅಭ್ಯಾಸ ಮಾಡಿದರು.

ನೂರ ಐವತ್ತಕ್ಕಿಂತಲೂ ಹೆಚ್ಚು ಕಲಾ ರಚನೆಗಳನ್ನು ಮಾಡಿರುವ ದೀಪಶ್ರೀಯವರು ಅನೇಕ ಬಹುಮಾನ, ಪ್ರಶಸ್ತಿಗಳನ್ನು ಪಡೆದಿರುವರು.

ಇತ್ತೀಚೆಗೆ  ನವೆಂಬರ ಹದಿನಾಲ್ಕರಂದು ಪುತ್ತೂರಿನ ಬಾಲವನದಲ್ಲಿ ವಿಶೇಷರೀತಿಯಲ್ಲಿ ನಡೆದ ಮಕ್ಕಳ ದಿನಾಚರಣೆಯ "ಬಾಲವನದಲ್ಲಿ ಬಾಲರು" ಕಾರ್ಯಕ್ರಮದಲ್ಲಿ ತನ್ನ ಚಿತ್ರ,ಕ್ರಾಫ್ಟ್ ಇತ್ಯಾದಿಗಳ ಪ್ರದರ್ಶನ ಏರ್ಪಡಿಸಿದ್ದರು. ಒಂದೂವರೆ ಸಾವಿರಕ್ಕಿಂತಲೂ ಅಧಿಕ ಮಕ್ಕಳು,ಹಿರಿಯರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ದಾಖಲಿಸಿದರು.

ತನ್ನ ತಂದೆಯವರ ಆಶೀರ್ವಾದ,ತಾಯಿಯವರ ಪ್ರೋತ್ಸಾಹ,ಹಾಗೂ ತಾನು ಕಲಿತ ಪ್ರಾಥಮಿಕ,ಪ್ರೌಢ ಶಾಲೆಗಳ ಮುಖ್ಯಸ್ಥರ,ಗುರುವೃಂದದವರ,ಪ್ರಕೃತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು,ಸ್ನೇಹಿತರ ಬೆಂಬಲದಿಂದ ಇನ್ನೂ ಹೆಚ್ಚಿನ ಪ್ರತಿಭೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಕನಸು ಹೊಂದಿರುವ ಪ್ರತಿಭಾವಂತರು ಇವರು.

ಲೇಖನ,ಕವನಗಳನ್ನು ಬರೆಯುವ ನೃತ್ಯ, ಸಂಗೀತ ಹವ್ಯಾಸಗಳನ್ನೂ ಹೊಂದಿರುವ ದೀಪಶ್ರೀಯವರು ಸಾಮಾಜಿಕ ಜಾಲತಾಣಗಳನ್ನು ಶೈಕ್ಷಣಿಕ ಪ್ರಗತಿಗೆ, ಕಲೆ,ಸಾಹಿತ್ಯ ಬೆಳವಣಿಗೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತನ್ನ ಸ್ವ-ಅನುಭವ, ಪ್ರತಿಭೆ-ಸಾಧನೆಗಳಿಂದ ನಿರೂಪಿಸಿದ್ದಾರೆ.

ಇರುವ ಅವಕಾಶವನ್ನು ನಾವು ಉಪಯೋಗಿಸಿಕೊಂಡಾಗ ಕಲಿಕೆಗೆ ಯಾವುದೇ ತೊಡಕುಂಟಾಗದೆಂಬುದೇ...ಇವರ ಅಭಿಪ್ರಾಯವಾಗಿದೆ.

ಮುಂದೆ ಉನ್ನತ ಶಿಕ್ಷಣ ಪಡೆದು, ಶಿಕ್ಷಕಿಯಾಗಿ,ಸಮಾಜ ಸೇವೆ ಮಾಡಬೇಕೆಂಬ ಕನಸು ಹೊಂದಿರುವ ಕು.ದೀಪಶ್ರೀಯವರ ಕನಸು ನನಸಾಗಲೆಂದು ಶುಭ ಹಾರೈಸೋಣ.

✍️ನಾರಾಯಣ ರೈ ಕುಕ್ಕುವಳ್ಳಿ.

0 تعليقات

إرسال تعليق

Post a Comment (0)

أحدث أقدم