ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಪ್ರತಿ ವರ್ಷ ನೀಡುವ 'ವಿಶ್ವಪ್ರಭಾ ಪುರಸ್ಕಾರ'ಕ್ಕೆ ಮಣಿಪಾಲದ ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ಸಂಧ್ಯಾ ಎಸ್.ಪೈ ಆಯ್ಕೆಯಾಗಿದ್ದಾರೆ.
2023ರ ಜನವರಿ 15ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪ ದಲ್ಲಿ ನಡೆಯುವ ಸಮಾರಂಭದಲ್ಲಿ ಸಂಧ್ಯಾ ಪೈ ಅವರಿಗೆ ಪ್ರಭಾ ವಿಶ್ವನಾಥ್ ಶೆಣೈ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Post a Comment