ರಾಮನಗರ : ವೇಗವಾಗಿ ಬಂದ ಲಾರಿ ತಿರುವಿನಲ್ಲಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆಯೊಂದು ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿ, ಬೆಜ್ಜರಹಳ್ಳಿ ಕಟ್ಟೆ ಮಾರ್ಗ ಮಧ್ಯೆ ಸಂಭವಿಸಿದೆ.
ಮೃತಪಟ್ಟವರನ್ನು ಮಲ್ಲೇಶಯ್ಯ (52) ಎಂದು ಗುರುತಿಸಲಾಗಿದೆ.
ಇವರು ಸುಗ್ಗನಹಳ್ಳಿ ಗ್ರಾಮದ ನಿವಾಸಿ , ಕೆಲಸದ ನಿಮಿತ್ತ ಮಾಗಡಿಗೆ ತೆರಳಲು ತಮ್ಮ ಮಗಳನ್ನು ಎಂದಿನಂತೆ ಬೆಜ್ಜರಹಳ್ಳಿ ಕಟ್ಟೆ ಗ್ರಾಮದ ಬಳಿಗೆ ಡ್ರಾಪ್ ಮಾಡಲು ಮಲ್ಲೇಶಯ್ಯ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
إرسال تعليق