ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೆಡಿಕಲ್ ಕೋರ್ಸ್ ಗಳ ಪ್ರವೇಶಕ್ಕೆ- ಮೇ 7ಕ್ಕೆ ನೀಟ್ -ಯುಜಿ ಪರೀಕ್ಷೆ

ಮೆಡಿಕಲ್ ಕೋರ್ಸ್ ಗಳ ಪ್ರವೇಶಕ್ಕೆ- ಮೇ 7ಕ್ಕೆ ನೀಟ್ -ಯುಜಿ ಪರೀಕ್ಷೆ

 


ನವದೆಹಲಿ: ಮೆಡಿಕಲ್ ಕೋರ್ಸ್ ಗಳ ಪ್ರವೇಶಕ್ಕೆ ದೇಶಾದ್ಯಂತ ನಡೆಸಲಾಗುವ ನೀಟ್ -ಯುಜಿ ಪರೀಕ್ಷೆ 2023ರ ಮೇ 7 ರಂದು ನಡೆಯಲಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪ್ರವೇಶ ಪರೀಕ್ಷೆ ಸಿಯುಇಟಿ -ಯುಜಿ ಮೇ 21 ರಿಂದ 31ರವರೆಗೆ ನಡೆಯಲಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದೆ.

2023 ರ ಜುಲೈ ವೇಳೆಗೆ ಪದವಿ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಆಗಸ್ಟ್ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಸಿಯುಇಟಿ -ಪಿಜಿ ಪರೀಕ್ಷೆಗಳ ದಿನಾಂಕವನ್ನು ಮುಂದಿನ ವಾರ ಪ್ರಕಟಿಸುವ ಸಾಧ್ಯತೆ ಇದೆ.

ಜೆಇಇ -ಮೇನ್ ಪರೀಕ್ಷೆ ಜನವರಿ 24 ರಿಂದ 31ರವರೆಗೆ ನಡೆಯಲಿದೆ. ಜೆಇಇ -ಮೇನ್ ಎರಡನೇ ಅವಧಿಯ ಪರೀಕ್ಷೆ ಏಪ್ರಿಲ್ ನಲ್ಲಿ ನಡೆಸಲಾಗುವುದು.

0 تعليقات

إرسال تعليق

Post a Comment (0)

أحدث أقدم