ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಗೇಶ್ ಬೆಳ್ಳಾರೆ ಗೆ ವಿಷ್ಣು ಯುವಶಕ್ತಿ ಮಜ್ಜಾರಡ್ಕ ವತಿಯಿಂದ ಆರ್ಥಿಕ ಸಹಾಯ

ನಾಗೇಶ್ ಬೆಳ್ಳಾರೆ ಗೆ ವಿಷ್ಣು ಯುವಶಕ್ತಿ ಮಜ್ಜಾರಡ್ಕ ವತಿಯಿಂದ ಆರ್ಥಿಕ ಸಹಾಯ

 


ಸುಳ್ಯ:  ಬೈಕ್ ಅಪಘಾತದಲ್ಲಿ ನಾಗೇಶ್ ಬೆಳ್ಳಾರೆ ಇವರಿಗೆ ಕೈಗೆ ತೀವ್ರವಾದ ಗಾಯವಾಗಿ ನರ ಕಟ್ ಆಗಿದ್ದು, ಸುಮಾರು 2 ಲಕ್ಷಕ್ಕಿಂತ ಅಧಿಕ ಖರ್ಚು ಆಗಿದೆ. ಇದರಿಂದ ತುಂಬಾ ಬಡತನದಲ್ಲಿರುವ ಕಾರಣ, ಸಮಾಜದ ಆರ್ಥಿಕ ಸಹಾಯ ಕೇಳಿದ್ದು ಇದಕ್ಕೆ ಶ್ರಮ.. ಸೇವೆ.. ಸಹಾಯ ಎಂಬ ಧ್ಯೇಯದೊಂದಿಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ  ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಹಾಗೂ ಪುತ್ತೂರು ತಾಲೂಕು ಕುಂಬ್ರ ವಲಯದ ಮಜ್ಜಾರಡ್ಕ ಘಟಕವು ರೂಪಾಯಿ 10,100. ಒಟ್ಟು ಮಾಡಿ ನಾಗೇಶ್ ಬೆಳ್ಳಾರೆ ಅವರ ಮನೆಗೆ ಹೋಗಿ ಹರೀಶ್ ಕೋಡಿಯಡ್ಕ ಇವರು ಚೆಕ್ ವಿತರಿಸಿದರು.


 ಘಟಕಕ್ಕೆ ಧನ್ಯವಾದ ಅರ್ಪಿಸಿದರು. ಹಾಗೂ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ದಿ.ವಸಂತ ತ್ಯಾಗರಾಜನಗರ ಇವರ ಕುಟುಂಬಕ್ಕೆ ಆರ್ಥಿಕವಾಗಿ ಕೈ ಜೋಡಿಸಿದ ಸಂಘಟನೆ ಅವರ ತಂದೆಗೆ ಸಂಘಟನೆಯ ಮಾಜಿ ಅಧ್ಯಕ್ಷರಾದ ಜನಾರ್ಧನ್ ಮಜ್ಜಾರ್ ಚೆಕ್ ವಿತರಣೆ ಮಾಡಿದರು.


ಈ ವೇಳೆ ಸಂಘಟನೆ ಅಧ್ಯಕ್ಷರು ಉದಯ್ ಸ್ವಾಮಿನಗರ, ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ ಮಯೂರ, ಗೌರವ ಸಲಹೆಗರಾರದ ಸಾಂತಪ್ಪ ಪೂಜಾರಿ ಒಲ್ತಾಜೆ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರ್,ಕ್ರೀಡಾ ಕಾರ್ಯದರ್ಶಿ ಗೌತಮ್ ಕೋಡಿಯಡ್ಕ,ಕ್ರೀಡಾ ಜೊತೆ ಕಾರ್ಯದರ್ಶಿ ನವೀನ್ ಮಜ್ಜಾರ್, ಸಾಂಸ್ಕೃತಿಕ  ಜೊತೆ ಕಾರ್ಯದರ್ಶಿ ಪ್ರತೀಕ್ ಯಾದವ್, ಸದಸ್ಯರಾದ ಹರೀಶ್ ಕೋಡಿಯಡ್ಕ, ಮನೋಹರ್ ಉಪ್ಪಳಿಗೆ, ಸತೀಶ್ ಮಜ್ಜಾರ್,ದೀಪಕ್ ಕೋಡಿಯಡ್ಕ ಉಪಸ್ಥಿತರಿದ್ದರು.


ಕುಂಬ್ರ ವಲಯದ ಮಜ್ಜಾರಡ್ಕ ಘಟಕದ ಶೌರ್ಯವಿಪತ್ತು ನಿರ್ವಹಣಾ ಸದಸ್ಯರು ಹಾಗೂ ಶ್ರೀ ವಿಷ್ಣು ಯುವಶಕ್ತಿ ಬಳಗದ ಸದಸ್ಯರು ಸಹಕರಿಸಿದರು.

0 تعليقات

إرسال تعليق

Post a Comment (0)

أحدث أقدم