ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲ್ಲಡ್ಕದಲ್ಲಿ" ಪ್ರೇರಣಾ ಭವಿಷ್ ಆವಾಸೀಯ" ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

ಕಲ್ಲಡ್ಕದಲ್ಲಿ" ಪ್ರೇರಣಾ ಭವಿಷ್ ಆವಾಸೀಯ" ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ



 ಪುತ್ತೂರು:  ಶ್ರೀರಾಮ ವಿದ್ಯಾ ಕೇಂದ್ರದ ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಕಲ್ಲಡ್ಕ ಇದರ ಆಶ್ರಯದಲ್ಲಿ ಭವಿಷ್ಯದಲ್ಲಿ ಶಿಕ್ಷಕರಾಗಲು ಬಯಸುವ ವಿದ್ಯಾರ್ಥಿಗಳಿಗಾಗಿ ಭವಿಷ್ ಘಟಕದ ವತಿಯಿಂದ  ಮೂರು ದಿನಗಳ  ಆವಾಸೀಯ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು.


 ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ  ಡಾ |ಪ್ರಭಾಕರ ಭಟ್ ಕಲ್ಲಡ್ಕ ಅವರು ವಹಿಸಿ , ಮನೆಯೇ ಮೊದಲ ಪಾಠಶಾಲೆ ತಾಯಿ ತಾನೇ ಮೊದಲ ಗುರು ಎಂಬಂತೆ ಒಂದಷ್ಟು  ಒಳ್ಳೆಯ ಮೌಲ್ಯಗಳನ್ನು ತಂದೆ-ತಾಯಿ ತಿಳಿಸಿಕೊಟ್ಟರೆ ಉಳಿದ ವಿಷಯಗಳನ್ನು ಗುರುಗಳು ತಿಳಿಸಿಕೊಡುತ್ತಾರೆ. 


ಯಾವ  ವ್ಯಕ್ತಿ ತನ್ನ ಜೀವನದಲ್ಲಿ ಧ್ಯೇಯ ಹೊಂದಿರುತ್ತಾನೋ ಅವನು ಜೀವನದಲ್ಲಿ ಗೆಲ್ಲುತ್ತಾನೆ. ಹೊಸ ಶಿಕ್ಷಣ ನೀತಿಯ ಅನ್ವಯ ಬುನಾದಿ ಶಿಕ್ಷಣವನ್ನು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಶಿಶು ಮಂದಿರದಲೇ ನೀಡುತ್ತಿದ್ದೇವೆ. ಆ ಹಂತದಲ್ಲಿ ಶಿಕ್ಷಣ ನೀಡುವ  ಗುರುಗಳ ಪಾತ್ರ ಬಹಳ ಮಹತ್ತರವಾದದ್ದು.

ಪ್ರಾಮಾಣಿಕತೆ, ಮಾನವೀಯತೆಯನ್ನು ಶಿಕ್ಷಕರಲ್ಲಿ ವೃದ್ಧಿಸಲು ಭವಿಷ್ ಪ್ರೇರಣಾ ಶಿಬಿರವನ್ನು ಮಾಡುತ್ತೇವೆ. ಒಬ್ಬ ವ್ಯಕ್ತಿಯಲ್ಲಿ ವ್ಯಕ್ತಿತ್ವವನ್ನು ನಿರ್ಮಿಸಿ ,ಬೆಳೆಸಿ  ಆ ವ್ಯಕ್ತಿಗೆ  ಸರಿಯಾಗಿ ಮಾರ್ಗದರ್ಶನ ಹಾಗೂ ದಿಕ್ಕುನ್ನು ತೋರಿಸುವ ಕಾರ್ಯ ಅದು ಗುರುವಿನಿಂದ ಮಾತ್ರ ಸಾಧ್ಯ. ಜಗತ್ತಿಗೆ ಶಾಂತಿ ಸಾರುವ ದೇಶ ಭಾರತ .ಈ ಚಿಂತನೆಗೆ ಬೇಕಾದ ದೃಷ್ಟಿಕೋನ ಕೊಡುವವರು ಅಧ್ಯಾಪಕರು ಹಾಗೂ ರಾಷ್ಟ್ರವನ್ನು ಮುನ್ನೆಡೆಸುವ ಸಾಮರ್ಥ್ಯ ಇರುವುದು ಶಿಕ್ಷಕನಿಗೆ.  ಹಾಗಾಗಿ ಶಿಕ್ಷಕರಿಗೆ ಸಮಾಜದಲ್ಲಿ ಮಹತ್ತರವಾದ ಪೂಜನೀಯ ಸ್ಥಾನವಿದೆ. ಯಾರು ಏನೇ ಹೇಳಿದರೂ ವಿಚಲಿತರಾಗದೇ ದೇಶದ ಭವಿಷ್ಯ ನಿರ್ಮಾಣ ಮಾಡುವಂತಹ ಒಳ್ಳೆಯ ಶಿಕ್ಷಕರಾಗಿ ಹೊರಬನ್ನಿ ಎಂದು ಶುಭಹಾರೈಸಿದರು.


ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ ವಿಷ್ಣು ಗಣಪತಿ ಭಟ್ ಇವರು,  ಶಿಕ್ಷಕರಿಗೆ ಪ್ರೇರಣೆ ನೀಡುವಂತಹ ಮತ್ತು ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಸಿಗದೇ ಇರುವ ಹಲವಾರು ವಿಷಯಗಳನ್ನು ಭವಿಷ್ ನಂತಹ ಶಿಬಿರಗಳು ನೀಡುತ್ತವೆ.ನಾವೆಲ್ಲಿ ಹೋದರೂ  ಜೀವನ ನಡೆಸಬಹುದು ಎಂಬ ಧೈರ್ಯ, ದೈಹಿಕ ಹಾಗೂಮಾನಸಿಕ ಸ್ಥೆರ್ಯವನ್ನು ಶಿಬಿರಗಳಿಂದ ಕಲಿಯುತ್ತೇವೆ. ಹಾಗಾಗಿ ಶಿಬಿರಗಳಲ್ಲಿ ಎಷ್ಟು ಭಾಗವಹಿಸುತ್ತೇವೆಯೋ ಅಷ್ಟು ಉನ್ನತ ಮಟ್ಟಕ್ಕೆ ಬೆಳೆಯುತ್ತಾ ಹೋಗುತ್ತೇವೆ ಶಿಕ್ಷಕ ವೃತ್ತಿಯಿಂದ ಸಿಗುವ ತೃಪ್ತಿ ಮತ್ತು  ಸಮಾಜದಲ್ಲಿ ನಮ್ಮನ್ನು ನೋಡುವ ದೃಷ್ಟಿ ಎರಡೂ ಎತ್ತರದ ಸ್ಥಾನದಲ್ಲಿರುತ್ತದೆ. ನಮ್ಮತನವನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ಜೊತೆಗೆ ವಿದ್ಯಾರ್ಥಿಯಾಗಿ ಶಿಕ್ಷಕ ವೃತ್ತಿಯನ್ನು ನಡೆಸಬೇಕು. ವೃತ್ತಿಯನ್ನು ಆರಿಸಿ ಬರುವಾಗ ನಾನು ಶಿಕ್ಷಕನೇ ಆಗುತ್ತೇನೆ ಎಂಬ ಗುರಿಯೊಂದಿಗೆ ಬರಬೇಕು ಎಂಬ ದೃಷ್ಟಿಕೋನದಿಂದ ಭವಿಷ್ 

ಶಿಬಿರವನ್ನು ಆಯೋಜಿಸಲಾಗಿದೆ.ಶಿಬಿರದಿಂದ  ಸಿಗುವ ಮೌಲ್ಯಗಳನ್ನು ನಿಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಒಬ್ಬ ಆದರ್ಶ ಶಿಕ್ಷಕ  ಎಂಬ ಪ್ರಖ್ಯಾತಿಯನ್ನು ಪಡೆಯಿರಿ ಎಂದರು.


ನಂತರ ವೈಯಕ್ತಿಕ ಶಿಬಿರ ಗೀತೆ ಹಾಗೂ ಶಿಬಿರಾರ್ಥಿಗಳಿಂದ ಅನಿಸಿಕೆಗಳನ್ನು ವ್ಯಕ್ತಪಡಿಸಲಾಯಿತು.


ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣ ಪ್ರಸಾದ್ ಶ್ರೀಮಾನ್ ಸ್ವಾಗತಿಸಿ,ಭವಿಷ್ ಘಟಕದ ಸಂಯೋಜಕಿ ಶ್ರೀಮತಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

0 تعليقات

إرسال تعليق

Post a Comment (0)

أحدث أقدم