ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ತಂಗಡಿ; ಆ್ಯಸಿಡ್ ಕುಡಿದು ಅಸ್ವಸ್ಥಗೊಂಡ ಮಹಿಳೆ ಸಾವು

ಬೆಳ್ತಂಗಡಿ; ಆ್ಯಸಿಡ್ ಕುಡಿದು ಅಸ್ವಸ್ಥಗೊಂಡ ಮಹಿಳೆ ಸಾವು

 


ಬೆಳ್ತಂಗಡಿ: ಮಹಿಳೆ ರಬ್ಬರ್‌ಗೆ ಬಳಸುವ ಆ್ಯಸಿಡ್ ಕುಡಿದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿ ನಡೆದಿದೆ.


ಪುದುವೆಟ್ಟು ಗ್ರಾಮದ ಮೇರ್ಲ ನಿವಾಸಿ ಬಿಂದು (48) ಎಂಬ ಮಹಿಳೆ ಆತ್ಮಹತ್ಯೆಗೊಳಗಾದ ದುರ್ದೈವಿ. ನ.27 ರಂದು ರಬ್ಬರ್‌ಗೆ ಬಳಸುವ ಆ್ಯಸಿಡ್ ಕುಡಿದು ತೀವ್ರ ಅಸ್ವಸ್ಥರಾಗಿದ್ದರು.

ಕೂಡಲೇ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಮೃತರು ಪುದುವೆಟ್ಟು ಗ್ರಾಮದ ಮೇರ್ಲ ನಿವಾಸಿ ರವಿ ಎಂಬವರ ಪತ್ನಿ. ಮೃತರು ಪತಿ ರವಿ, ಇಬ್ಬರು ಮಕ್ಕಳಾದ ವಿನೀಶ್ ಮತ್ತು ವಿಜಿದ ಇವರನ್ನು ಅಗಲಿದ್ದಾರೆ.



0 Comments

Post a Comment

Post a Comment (0)

Previous Post Next Post