ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೂತನವಾಗಿ ಸ್ಥಾಪನೆಯಾದ ನಮ್ಮ ಕ್ಲಿನಿಕ್ ಕರ್ತವ್ಯ ನಿರ್ವಹಿಸಲು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ನೂತನವಾಗಿ ಸ್ಥಾಪನೆಯಾದ ನಮ್ಮ ಕ್ಲಿನಿಕ್ ಕರ್ತವ್ಯ ನಿರ್ವಹಿಸಲು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

 


ಕೇಂದ್ರ ಸರ್ಕಾರದ 15 ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರದ ಅನುಮೋದನೆಯಂತೆ, ನೂತನವಾಗಿ ಸ್ಥಾಪಿಸಲಾಗುವ "ನಮ್ಮ ಕ್ಲಿನಿಕ್"ಗಳಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯಾಧಿಕಾರಿಗಳ ಹುದ್ದೆಗೆ 01 ವರ್ಷದ ಅವಧಿಗೆ ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆಸಕ್ತಿವುಳ್ಳ ಎಂ.ಬಿ.ಬಿ.ಎಸ್ ಪದವಿ ಮತ್ತು ಕೆ.ಎಂ.ಸಿ ಕೌನ್ಸಿಲ್‌ ನೊಂದಾವಣಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮುಂದುವರಿದು, ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳು ಮತ್ತು ಒಂದು ಜೆರಾಕ್ಸ್ ಪ್ರತಿ, ಭಾವಚಿತ್ರದೊಂದಿಗೆ ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ರವರ ಕಛೇರಿ, ಅನೆಕ್ಸ್-2 ಕಟ್ಟಡ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿ, ಎನ್.ಆರ್.ಚೌಕ, ಬೆಂಗಳೂರು-560002 ವಿಳಾಸಕ್ಕೆ ಖುದ್ದಾಗಿ - ಅರ್ಜಿ ಸಲ್ಲಿಸಲು ಎಂದು ಮುಖ್ಯ ಆರೋಗ್ಯಾಧಿಯಾದ ಡಾ. ಬಾಲಸುಂದರ್ ರವರು ಕೋರಿರುತ್ತಾರೆ.

0 Comments

Post a Comment

Post a Comment (0)

Previous Post Next Post