* ಕೊಣಾಜೆ ಗ್ರಾಮ
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಕೊಣಾಜೆ ಕೆಳಗಿನಮನೆ ಅಚ್ಯುತಗಟ್ಟಿಯವರ ಮನೆಯಂಗಳದಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕರ್ನಾಟಕ ಸರಕಾರದ ಅಲೆಮಾರಿ ಮತ್ತು ಅರೆಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು 67 ಹಣತೆಗಳನ್ನು ಬೆಳಗಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಉಳ್ಳಾಲ ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದಲ್ಲಿ ಕೊಲ್ಯ ಭಗವತಿ ವಿದ್ಯಾಕೇಂದ್ರದ ಅಧ್ಯಕ್ಷ ಸದಾಶಿವ ಉಳ್ಳಾಲ, ಕೋಟೆಕಾರ್ ಚಂದ್ರಿಕಾ ರೈ, ಸುರೇಖಾ ಚಂದ್ರಹಾಸ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಕೊಣಾಜೆ ಕೆಳಗಿನ ಮನೆಯ ಅಚ್ಯುತ ಗಟ್ಟಿಯವರನ್ನು ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.
ಕಸಾಪ ಉಳ್ಳಾಲ ಘಟಕದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿದರು. ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಹರೇಕಳ ರಾಮಕೃಷ್ಣ ಶಾಲೆಯ ಅಧ್ಯಾಪಕ ರವಿಶಂಕರ್, ಮಂಗಳೂರು ವಿವಿಯ ಶ್ರೀವಾಣಿ ಕಾಕುಂಜೆ ಕನ್ನಡ ಹಾಡುಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಲಾಯಿತು.
* ಕೈರಂಗಳ ಗ್ರಾಮ
ದ ಕ ಜಿಲ್ಲಾ ಸಾಹಿತ್ಯ ಪರಿಷತ್ ಉಳ್ಳಾಲ ವಲಯದ ಕೈರಂಗಳ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಗ್ರಾಮ ಸಂಚಾಲಕರಾದ ಹೇಮಚಂದ್ರ ಕೈರಂಗಳ ಇವರ ನೇತೃತ್ವದಲ್ಲಿ ಯುವಕ ಮಂಡಲದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದರಾದ ವಿಠಲ ಕುಲಾಲ್ ಕೈರಂಗಳ ಹಾಗೂ ಕೃಷ್ಣ ಮೂಲ್ಯ ಆನೆಗುಂಡಿ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳು ನಾಡಗೀತೆ ಹಾಡಿದರು. ನಿವೃತ್ತ ಶಿಕ್ಷಕಿ ಶ್ರೀಮತಿ ಗೀತಾ ಕೆ ಕನ್ನಡ ರಾಜ್ಯೋತ್ಸವದ ಉಪನ್ಯಾಸ ನೀಡಿದರು. ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ, ಕೈರಂಗಳ ಗ್ರಾಮ ಪಂಚಾಯತ್ ಸದಸ್ಯರಾದ ಶಶಿಧರ್ ಶೆಟ್ಟಿ ಮಜಲು, ಅಂಗನವಾಡಿ ಶಿಕ್ಷಕಿ ಶ್ರೀಮತಿ ಪೂಜಾ ತಾರಾನಾಥ್, ಗ್ರಾಮದ ಆರೋಗ್ಯ ಅಧಿಕಾರಿ ಶ್ರೀಮತಿ ಆಶಾ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಊರಿನ ಗಣ್ಯರು, ಅಂಗನವಾಡಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.
* ಪಾವೂರು ಗ್ರಾಮ
ಪಾವೂರ್ ಗ್ರಾಮದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ಶ್ರೀಯುತ ಅಶ್ರಫ್ ರವರ ಮನೆಯಂಗಳ ದಲ್ಲಿ ನಾಡಗೀತೆ ಹಾಡುದರ ಮೂಲಕ ಆಚರಿಸ ಲಾಯಿತು. ಗ್ರಾಮ ಸಂಚಾಲಕರಾದ ರಾಧಾಕೃಷ್ಣರಾವ್ ಟಿ.ಡಿ ರಾಜ್ಯೋತ್ಸವ ಸಂದೇಶ ನೀಡಿದರು.
* ಅಂಬ್ಲಮೊಗರು ಗ್ರಾಮ
ದಿನಾಂಕ ೧/೧೧/೨೦೨೨ ರಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದ ವತಿಯಿಂದ ಅಂಬ್ಲಮೊಗರು ಗ್ರಾಮದ ಶ್ರೀ ಪ್ರಶಾಂತ ಉಡುಪ ಇವರ ಮನೆಯಂಗಳದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಸಕುಟುಂಬ ಸಮೇತರಾಗಿ ಬೆಳಿಗ್ಗೆ ೧೦:೦೦ ರಿಂದ ೧೦:೩೦ ರ ವರೆಗೆ
ಆಚರಿಸಲಾಯಿತು. ಸುಮಾರು ೫೦ ಸದಸ್ಯರುಗಳನ್ನು ಒಳಗೊಂಡು ಶ್ರೀಯುತ ಸುಬ್ರಮಣ್ಯ ಉಡುಪ ಪ್ರಾಂಶುಪಾಲರು (ಎಕ್ಸ್ ಪರ್ಟ್ ಕಾಲೇಜು )ಇವರು ಅಧ್ಯಕ್ಷ ಭಾಷಣವನ್ನು ಮಾಡಿದರು. ಮುಖ್ಯ ಅತಿಥಿಯಾಗಿ ಶ್ರೀ ನಿತ್ಯಾನಂದ ರಾವ್ (ಮಣಿ ಕೃಷ್ಣ ಆಕಾಡಮಿ ಸುರತ್ಕಲ್) ಇವರು ರಾಜ್ಯೋತ್ಸವದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಾಮೂಹಿಕವಾಗಿ ಕನ್ನಡ ಗೀತೆಯನ್ನು ಹಾಡಲಾಯಿತು. ಅಂಬ್ಲಮೊಗರು ಗ್ರಾಮದ ಸಂಚಾಲಕಿಯಾದ ಕುಸುಮ ಪ್ರಶಾಂತ್ ಉಡುಪ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸರ್ವರೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಧನ್ಯವಾದ ಸಮರ್ಪಣೆ ಮತ್ತು ಸಿಹಿ ತಿಂಡಿಯೊಂದಿಗೆ ಯಶಸ್ವಿಯಾಗಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
* ಬೆಳ್ಮ ಗ್ರಾಮ
ಬೆಳ್ಮ ಗ್ರಾಮದ ವತಿಯಿಂದ ೬೭ ನೇ ಕರ್ನಾಟಕ ರಾಜ್ಯೋತ್ಸವ*
'ಮನೆಯಂಗಳದಲ್ಲಿ ರಾಜ್ಯೋತ್ಸವ 'ಕಾರ್ಯಕ್ರಮವು ಶ್ರೀಮತಿ ರಾಧಿಕಾ ಶ್ರೀಧರ್ ಅವರ ಅಡ್ಕರೆ ಪಡ್ಪುವಿನ, 'ಪಂಜಿಲಪಾಲ್ 'ಮನೆಯಲ್ಲಿ ನಡೆಯಿತು. ಆರಂಭದಲ್ಲಿ ನಾಡ ಗೀತೆಯನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಡಿದರು. ಕ.ಸಾ.ಪರಿಷತ್ತಿನ ಗ್ರಾಮದ ಪ್ರತಿನಿಧಿ ರಾಜೀವ ಮಾಸ್ತರರು ಸ್ವಾಗತಿಸಿದರು. ಪರಿಷತ್ತಿನ ಪದಾಧಿಕಾರಿ ಗುಣಾಜೆ ರಾಮಚಂದ್ರ ಭಟ್ ರಾಜ್ಯೋತ್ಸವದ ಮಹತ್ತ್ವದ ಬಗ್ಗೆ ಮಾತಾಡಿ, 'ಕನ್ನಡಾಂಬೆಗೆ ನಮನ' ಎಂಬ ಸ್ವರಚಿತ ಕವನವನ್ನು ವಾಚಿಸಿದರು. ಶ್ರೀಮತಿ ರಾಧಿಕಾ ಶ್ರೀಧರ್ ವಂದಿಸಿದರು.
ಈ ಸಂಕ್ಷಿಪ್ತ, ಸರಳ ಕಾರ್ಯಕ್ರಮದಲ್ಲಿ ಹುಸೈನ್ ಬಿ.ಕೆ, ಪ್ರಸನ್ನ ಆಚಾರ್ಯ, ಸಾಯಿ ಚರಣ್, ಪಂಜಿಲ ಬಾಬು, ಸುಮತಿ, ಖತೀಜಮ್ಮ, ವಿದ್ಯಾರ್ಥಿಗಳಾದ ಸೃಜನ್, ನಿಶ್ವಿ ಡಿ. ಸಾಲಿಯಾನ್, ಆಯಿಶಾ ಅಮೀಮ, ಮರಿಯಮ್ಮ ಸಹ್ಲ, ಫಾತಿಮತ್ ರಿಯಾ, ಫಾತಿಮತ್ ಸಬಿಹ, ಆಯಿಶಾ ಸಂಶೀನ, ಫಾತಿಮತ್ ಸಪ್ನ, ಫಾತಿಮಾ ಹಝಿಮ ಮುಂತಾದವರು ಭಾಗವಹಿಸಿದರು. ಈ ಕಾರ್ಯಕ್ರಮದ ಯಶಸ್ಸಿಗೆ ರಾಜೀವ ಮಾಸ್ತರ್ ಹಾಗೂ ಪಂಜಿಲ ಪಾಲ್ ಮನೆಯವರು ತುಂಬಾ ಸಹಕರಿಸಿದ್ದಾರೆ.
* ಮಂಜನಾಡಿ ಗ್ರಾಮ
ಮಂಜನಾಡಿ ಗ್ರಾಮದಲ್ಲಿ ೬೭ ನೇ ಕನ್ನಡ ರಾಜ್ಯೋತ್ಸವ ಆಚರಣೆ:
ದಿನಾಂಕ 1.11.2022 ರಂದು ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದಿಂದ ಶ್ರೀ ರವಿಕುಮಾರ್ ಕೋಡಿ ಇವರ ಮನೆ ಅಂಗಳದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ನಿರ್ಮಲ್ ನಿಶ್ಚಲ್ ಬಳಗದವರು ನಾಡಗೀತೆಯನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಸಂತ ಕೋಡಿ ಶ್ರೀಮತಿ ನಯನ ವಸಂತ್ ಸಫ್ವಾನ್ ಉರುಮನೆ ಮುಖ್ಯ ಅತಿಥಿಗಳಾಗಿದ್ದರು. ರಕ್ಷಿತ್ ಕೋಡಿ, ಮನೀಶ್ ಸಾರ್ತಬೈಲ್, ಇಫಾಜ್ ಉರುಮನೆ ಮೊದಲಾದವರು ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತು ಮಂಜನಾಡಿ ಗ್ರಾಮದ ಸಂಚಾಲಕರಾದ ಅಶಿರುದ್ಧಿನ್ ಸಾರ್ತಬೈಲ್ ಅತಿಥಿಗಳನ್ನು ಶಾಲು ಹೊದಿಸಿ ಸ್ವಾಗತಿಸಿದರು. ಉಳ್ಳಾಲ ಘಟಕದ ಪದಾಧಿಕಾರಿಗಳಾದ ಶ್ರೀ ರವಿಕುಮಾರ್ ಕೋಡಿಯವರು ಕಾರ್ಯಕ್ರಮ ನಿರೂಪಿಸಿ ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಲು ಕರೆ ನೀಡಿದರು. ಶಿಕ್ಷಕ ವಸಂತ ಕೋಡಿಯವರು ಸಂಘಟಿತ ಪ್ರಯತ್ನದಿಂದ ಕನ್ನಡ ಭಾಷೆಯನ್ನು ಬೆಳೆಸಬೇಕೆಂದರು ಶ್ರೀಮತಿ ಲೀಲಾಕ್ಷಿ ರವಿ ಕೋಡಿಯವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
* ಇರಾ ಗ್ರಾಮ
ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಹಮ್ಮಿಕೊಂಡ ವಿವಿಧ ಗ್ರಾಮಗಳಲ್ಲಿ "ಮನೆಯಂಗಳದಲ್ಲಿ ರಾಜ್ಯೋತ್ಸವ" ಕಾರ್ಯಕ್ರಮದಲ್ಲಿ, ಇರಾ ಗ್ರಾಮದ ಕಾರ್ಯಕ್ರಮವು "ಕೊಳಲು" ಮನೆಯಲ್ಲಿ ನಡೆಯಿತು. ಕ.ಸಾ.ಪ.ಉಳ್ಳಾಲ ತಾಲೂಕು ಘಟಕದ ಇರಾ ಗ್ರಾಮ ಸಂಚಾಲಕಿ ಶ್ರೀಮತಿ ಮಂಜುಳಾ. ಜಿ.ರಾವ್ ಇವರ ಸಂಚಾಲಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲ|| ಡಾ|| ಗೋಪಾಲ ಆಚಾರ್ ಮಂಚಿ, (ಉಪನ್ಯಾಸಕರು- ಕಣಚೂರ್ ಮೆಡಿಕಲ್ ಕಾಲೇಜು ನಾಟೇಕಲ್) ರಾಜ್ಯೋತ್ಸವ ಸಂದೇಶ ನೀಡಿದರು. ಯೋಧ ಪ್ರದೀಪ್ (ಲಾನ್ಸ್ ನಾಯ್ಕ್, ಸೌತ್ ವೆಸ್ಟರ್ನ್ ಕಮಾಂಡ್, ಭಾರತೀಯ ಸೇನೆ, ಜೈಪುರ ರಾಜಾಸ್ಥಾನ) ಅತಿಥಿ ಯಾಗಿ ಭಾಗವಹಿಸಿದರು.ಇರಾ ಶ್ರೀ ಸೋಮನಾಥೇಶ್ವರ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಪದ್ಮಾ ಎಸ್.ರಾವ್ ಇವರು ಉಪಸ್ಥಿತರಿದ್ದರು. ವಿಶೇಷವಾಗಿ, ಈ ರಾಜ್ಯೋತ್ಸವ ಸಮಾರಂಭದಲ್ಲಿ ನೆರೆದಿದ್ದ ಪುಟ್ಟ ಮಕ್ಕಳಾದಿಯಾಗಿ ಹಿರಿಯರಿಗೂ ಕನ್ನಡ ನಾಡು~ ನುಡಿ ~ ಸಾಹಿತ್ಯ~ ಸಂಸ್ಕೃತಿಯ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಕವಯತ್ರಿ ಮತ್ತು ಶಿಕ್ಷಕಿ ಶ್ರೀಮತಿ ಶೈಲಜಾ ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಮಂಜುಳಾ.ಜಿ. ರಾವ್ ಇವರು ಸ್ವಾಗತ ಮತ್ತು ಧನ್ಯವಾದ ಕಾರ್ಯಕ್ರಮ ನೆರವೇರಿಸಿದರು. ಕ.ಸಾ.ಪ. ಉಳ್ಳಾಲ ಘಟಕದ ಕುರ್ನಾಡು ಗ್ರಾಮ ಸಂಚಾಲಕಿ ಅಶ್ವಿನಿ ಕುರ್ನಾಡು ಮತ್ತು ಬೆಳ್ಮ ಗ್ರಾಮ ಸಂಚಾಲಕಿ ಶ್ರೀಮತಿ ಅಮಿತ ಆಳ್ವ ಇವರೂ ಉಪಸ್ಥಿತರಿದ್ದರು. ನಾಡಗೀತೆಗಳ ಗಾಯನ, ಆಟೋಟ, ಮನರಂಜನೆ, ಉಪಹಾರ ಸೇವನೆಯೊಂದಿಗೆ ಈ ಕಾರ್ಯಕ್ರಮ ಸಂಪನ್ನಗೊಂಡಿತು.
* ಬಾಳೆಪುಣಿ ಗ್ರಾಮ
ಬಾಳೆಪುಣಿ - ಮನೆಯಂಗಳದಲ್ಲಿ ರಾಜ್ಯೋತ್ಸವ
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಳ್ಳಾಲ ತಾಲೂಕು ಘಟಕದ ವತಿಯಿಂದ ಮುಡಿಪು ಜನಶಿಕ್ಷಣ ಟ್ರಸ್ಟ್ ಸಹಭಾಗಿತ್ವ ದಲ್ಲಿ ಮನೆಯಂಗಳದಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಬಾಳೆಪುಣಿ ಗ್ರಾಮದ ನವಗ್ರಾಮ ಇಸ್ಮಾಯಿಲ್ ಕಣ0ತೂರು ಅವರ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮವನ್ನು ಜನಪದ ವಿದ್ವಾಂಸ ಚಂದ್ರಹಾಸ ಕಣಂತೂರು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಮಾಜಿ ಒಂಬಡ್ಸ್ ಮೆನ್ ಶೀನ ಶೆಟ್ಟಿ ಮನೆಯಂಗಳದಲ್ಲಿ ರಾಜ್ಯೋತ್ಸವ ಎಂಬ ಪರಿಷತ್ತಿನ ಆಶಯ ಅರ್ಥಪೂರ್ಣವಾಗಿದೆ ಎಂದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣಮೂಲ್ಯ, ಸ್ಥಳೀಯ ಪಂಚಾಯತ್ ಸದಸ್ಯೆಯರಾದ ಸೆಮೀಮ, ಜೋಹರ, ಚಿತ್ರಕಲಾ ಶಿಕ್ಷಕ ಸುಧೀರ್ ಬಾಳೆಪುಣಿ, ಶಾಲಾಭಿವೃದ್ಧಿ ಅಧ್ಯಕ್ಷ ಬಾವು, ಅಬೂಬಕ್ಕರ್ ಜಲ್ಲಿ, ಚೇತನ್ ಉಪಸ್ಥಿತರಿದ್ದರು. ಚಂದ್ರಶೇಖರ ಪಾತೂರು ಸ್ವಾಗತಿಸಿ ವಂದಿಸಿದರು.
* ಕೋಟೆಕಾರ್ ಪಟ್ಟಣ ಪಂಚಾಯತು
ಕೋಟೆಕಾರು ನೀಲಿಪಾಲಿನ 'ದೇವಿಕೃಪಾ' ಮನೆಯಲ್ಲಿ ಸರಳವಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡ ಪ್ರೇಮಿ, ಸಂಘಟಕ, ಹವ್ಯಾಸಿ ಯಕ್ಷಗಾನ ಕಲಾವಿದ ಶ್ರೀ ಸುಕೇಶ್ ಮಂಜನಾಡಿ ರಾಜ್ಯೋತ್ಸವದ ಸಂದೇಶ ನೀಡಿದರು. ನಿಸ್ವನ ನಾಡಗೀತೆ ಹಾಡಿದರು. ಗ್ರಾಮ ಸಂಚಾಲಕಿ ವಸುಂಧರ ಹರೀಶ್ ಕಾರ್ಯಕ್ರಮ ಸಂಯೋಜಿಸಿದ್ದರು.
* ಉಳ್ಳಾಲ ನಗರಸಭೆ
ಮಾಧವ್ ಉಳ್ಳಾಲ್ ಅವರ ನೇತೃತ್ವದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ಅರುಣ್ ಉಳ್ಳಾಲ್ ಮಾತನಾಡಿ ರಾಜ್ಯೋತ್ಸವ ಸಂದೇಶ ನೀಡಿದರು.
* ಸೋಮೇಶ್ವರ ಪುರಸಭೆ
ತೋನ್ಸೆ ಪುಷ್ಕಳ ಕುಮಾರ್ ಅವರ ಗಾನ ಮನೆಯಂಗಳದಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು.
* ಕಿನ್ಯಾ ಗ್ರಾಮ
ಕೀನ್ಯಾ ಗ್ರಾಮದ ಕಜೆ ಮನೆಯೊಂದರ ಅಂಗಳದಲ್ಲಿ ಸರಳವಾಗಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಗ್ರಾಮ ಸಂಚಾಲಕಿ ಮೇಘಶ್ರೀ ಕಜೆ ಸಂದೇಶ ನೀಡಿದರು.
* ನರಿಂಗಾನ ಗ್ರಾಮ
ಯುವಕಮಂಡಲ ನರಿಂಗಾನದ ವತಿಯಿಂದ ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಮ ಸಂಚಾಲಕ ಆನಂದ ಪೂಜಾರಿ ಸರ್ಕುಡೆಲ್ ರಾಜ್ಯೋತ್ಸವ ಸಂದೇಶ ನೀಡಿದರು.
* ಪೆರ್ಮನ್ನೂರು ಗ್ರಾಮ
ಗ್ರಾಮದ ಶ್ರೀಮತಿ ಸುವಾಸಿನಿ ಬಬ್ಬುಕಟ್ಟೆ ಇವರ ಮನೆ ಅಂಗಳದಲ್ಲಿ ಸರಳವಾಗಿ ರಾಜ್ಯೋತ್ಸವ ಆಚರಿಸಲಾಯಿತು. ಗ್ರಾಮ ಸಂಚಾಲಕಿ ವಿಜಯಲಕ್ಷ್ಮಿ ಕಟೀಲು ರಾಜ್ಯೋತ್ಸವ ಸಂದೇಶ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق