ಹಿಮಾಚಲ ಪ್ರದೇಶ; ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಮತಹಾಕಿದ್ದ ಹಿಮಾಚಲ ಪ್ರದೇಶದ ಶ್ಯಾಮ್ ಸರಣ್ ನೇಗಿ ಶನಿವಾರ ಮೃತಪಟ್ಟಿದ್ದಾರೆ.
ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 106 ವರ್ಷ ವಯಸ್ಸಾಗಿತ್ತು. ಸ್ವತಂತ್ರ ಭಾರತದ ಮೊದಲ ಮತದಾರ ಅಂತ ಕರೆಸಿಕೊಂಡಿದ್ದ ಇವರು ಒಂದೆರಡು ದಿನಗಳ ಹಿಂದೆ ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿಯೂ ಭಾಗವಹಿಸಿದ್ದರು.
ಬುಡಕಟ್ಟು ಜಿಲ್ಲೆಯಾಗಿರೋ ಕಿನ್ನೋರ್‌ನವರಾದ ನೇಗಿ, ತಮ್ಮ ಮನೆಯಲ್ಲಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದರು. ಆ ಮೂಲಕ 34 ನೇ ಬಾರಿಗೆ ಮತದಾನ ಮಾಡಿ ಇತಿಹಾಸ ಬರೆದಿದ್ದರು. 1951ರಲ್ಲಿ ನಡೆದಿದ್ದ ಜನರಲ್ ಎಲೆಕ್ಷನ್‌ನಲ್ಲಿ ಮೊದಲ ಸಲ ಮತ ಹಾಕಿದ್ದ ಇವರು, ಇಲ್ಲಿವರೆಗೆ ನಡೆದ 16 ಲೋಕಸಭೆ ಹಾಗೂ ವಿಧಾನಸಭೆ ಮತ್ತು ಎಲ್ಲ ಸ್ಥಳೀಯ ಎಲೆಕ್ಷನ್‌ಗಳಲ್ಲಿ ವೋಟ್ ಮಾಡಿದ್ದರು.
ಇದೀಗ ಅವರು ಇಹಲೋಕ ತ್ಯಜಿಸಿದ್ದಾರೆ.
إرسال تعليق