ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರು; ಅಶ್ವಿನಿ ಬಾರ್ & ರೆಸ್ಟೋರೆಂಟ್ ಪಾಲುದಾರ ಕರುಣಾಕರ ರೈ ವಿರುದ್ದ ಸುಮೋಟೋ ಕೇಸ್ ದಾಖಲು

ಪುತ್ತೂರು; ಅಶ್ವಿನಿ ಬಾರ್ & ರೆಸ್ಟೋರೆಂಟ್ ಪಾಲುದಾರ ಕರುಣಾಕರ ರೈ ವಿರುದ್ದ ಸುಮೋಟೋ ಕೇಸ್ ದಾಖಲು

 


ಪುತ್ತೂರು: ಪಟಾಕಿ ಗೊಡೌನ್ ಗೆ ನಲ್ಲಿ ಪಟಾಕಿ ಸ್ಫೋಟಕ್ಕೆ ಸಂಬಂಧಿಸಿ ಕಟ್ಟಡದ ಮಾಲಕ ಪುತ್ತೂರು ಅಶ್ವಿನಿ ಬಾರ್ & ರೆಸ್ಟೋರೆಂಟ್ ಪಾಲುದಾರ ಕರುಣಾಕರ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರು ಸೆಕ್ಷನ್ 9B ಅಡಿ ಸೊಮೋಟೋ ಪ್ರಕರಣ ದಾಖಲಿಸಿದ್ದಾರೆ.

ಸೆಕ್ಷನ್ 9ಬಿ ಅಡಿ ಕರುಣಾಕರ್ ರೈ ವಿರುದ್ಧ ಸ್ಫೋಟಕ ದಾಸ್ತಾನು ಗಂಭೀರ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪುತ್ತೂರು ದರ್ಬೆಯ ಅಶ್ವಿನಿ ಹೊಟೆಲ್ ಮಾಲಕರಾದ ಕರುಣಾಕರ ರೈ ಮಾಲಿಕತ್ವದ ದರ್ಬೆಯ ಆರಾಧ್ಯ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿದ್ದ ಪಟಾಕಿ ಗೊಡೌನ್ ನಲ್ಲಿ ಶೇಖರಿಸಿಟ್ಟ ಪಟಾಕಿ ಸಂಜೆ 6 ಗಂಟೆ ಸಮಯಕ್ಕೆ ಪಟಾಕಿ ಸ್ಪೋಟ ಸಂಭವಿಸಿತು.


ಪಟಾಕಿ ಸಿಡಿಯುವ ಶಬ್ಧಕ್ಕೆ ದರ್ಬೆ ಸುತ್ತಮುತ್ತಲಿನ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಆ ಕಟ್ಟಡದಲ್ಲಿರುವ ಎಲ್ಲಾ ಅಂಗಡಿಯವರು ಬಂದ್ ಮಾಡಿ ಹೊರ ಬಂದಿದ್ದಾರೆ. ದರ್ಬೆಯಲ್ಲಿ ಪಟಾಕಿ ಮಾರುವವರಿಗೆ ಸೇರಿದ ಪಟಾಕಿ ಎನ್ನಲಾಗಿದೆ. ಆದರೆ ಕರುಣಾಕರ ರೈ ತನ್ನ ಮನೆಯ ಉಪಯೋಗಕ್ಕೆ ಇಟ್ಟ ಪಟಾಕಿ ಎಂದು ಸ್ಥಳೀಯ ಪತ್ರಿಕೆಗೆ ಹೇಳಿಕೆ ನೀಡಿದ್ದರು.


ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಘಟನೆ ನಡೆದಿದೆಯಾ ಅಥವಾ ಬೆಂಕಿ ಆಕಸ್ಮಿಕ ನಡೆದಿದೆಯಾ ಎನ್ನುವ ಬಗ್ಗೆ ತನಿಖೆಯಿಂದ ತಿಳಿದುಬರಬೇಕಾಗಿದೆ. 

0 Comments

Post a Comment

Post a Comment (0)

Previous Post Next Post