ಬೆಂಗಳೂರು: ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಡಾಲಿ ಧನಂಜಯ್ ತಮ್ಮ ನಿರ್ಮಾಣದ ಮೂಲಕವೇ ಪ್ರೇಮ್ ಮಗಳನ್ನು ಪರಿಚಯಿಸುತ್ತಿದ್ದಾರೆ.
ಅಂದು ಮಗ ಇಂದು ಮಗಳು-ಲವ್ಲಿ ಸ್ಟಾರ್ ಮಕ್ಕಳು ಬೆಳ್ಳಿ ತೆರೆಗೆ
ಕನ್ನಡದ ಲವ್ಲಿ ಸ್ಟಾರ್ ಪ್ರೇಮ್ ಒಳ್ಳೆ ಕಥೆಯನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ.
ಲವ್ಲಿ ಸ್ಟಾರ್ ಪ್ರೇಮ್ ಮಕ್ಕಳು ಈಗ ಇಂಡಸ್ಟ್ರೀಗೆ ಕಾಲಿಟ್ಟಾಗಿದೆ. ಹೌದು, ಪ್ರೇಮ್ ಮಗ ಏಕಾಂತ್ ಇತ್ತೀಚಿಗೆ ಬಂದ ಗುರು ಶಿಷ್ಯರು ಮೂಲಕ ಬೆಳ್ಳಿ ತೆರೆಗೆ ಬಂದಿದ್ದಾರೆ. ಅದ್ಭುತವಾಗಿಯೇ ಬೆಳ್ಳಿ ತೆರೆ ಮೇಲೆ ಅಭಿನಯಿಸಿದ್ದಾರೆ. ಜೊತೆಗೆ ಎಲ್ಲರ ಗಮನ ಕೂಡ ಸೆಳೆದಿದ್ದಾರೆ.
ಟಗರು ಪಲ್ಯ ಚಿತ್ರದ ಮೂಲಕ ನಾಯಕಿಯಾಗಿ ನೆನಪಿರಲಿ ಪ್ರೇಮ್ ಮಗಳು ಆಯ್ಕೆ ಆಗಿದ್ದಾರೆ. ಇದಕ್ಕಾಗಿಯೇ ಪ್ರೇಮ್ ಮಗಳು ಅಮೃತಾ ಪ್ರೇಮ್ ಎಲ್ಲ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.
ವಿದ್ಯಾಭ್ಯಾಸದಲ್ಲೂ ಮುಂದಿರೋ ಅಮೃತಾ ಪ್ರೇಮ್, ಚಿತ್ರಕ್ಕಾಗಿಯೇ ಬೇಕಾಗುವ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.
Post a Comment