ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕರಾವಳಿ ವಿಶೇಷ ತಿಂಡಿ ಸವಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ

ಕರಾವಳಿ ವಿಶೇಷ ತಿಂಡಿ ಸವಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ

 


ಉಡುಪಿ:  ಸಮೀಪದ ಹೊಟೇಲ್ ಗೆ ತೆರಳಿದ
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಖುದ್ದಾಗಿ ಆ ಹೊಟೇಲ್‌ನಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ದೃಶ್ಯ ಕಂಡು ಬಂದಿತು.

ಹೊಟೇಲ್‌ನಲ್ಲಿ ಕರಾವಳಿಯ ಪ್ರಸಿದ್ಧ ಬನ್ಸ್ ಸವಿದ ಅವರು ಕೆಲಕಾಲ ಸ್ಥಳೀಯರೊಂದಿಗೆ ಕುಶಲೋಪರಿ ನಡೆಸಿ ಬಳಿಕ ಅಲ್ಲಿಂದ ತೆರಳಿದರು.

ಈ ಸಂಗತಿಯನ್ನು ಅವರು ತಮ್ಮ ಟ್ವಿಟರ್‌ನಲ್ಲಿಯೂ ಹಂಚಿಕೊಂಡಿದ್ದು, ವಿವಿಧ ಕಾರ್ಯಕ್ರಮಗಳ ನಿಮಿತ್ತ ಇಂದು ಉಡುಪಿಗೆ ಆಗಮಿಸಿದ ವೇಳೆ ದಾರಿ ಮಧ್ಯೆ ಮಯೂರ ಹೋಟೆಲ್ ಒಂದರಲ್ಲಿ ಮಂಗಳೂರು ಬನ್ಸ್ ಸವಿದೆ.

ಈ ಭಾಗದ ವಿಶೇಷ ತಿನಿಸುಗಳಾದ ಬನ್ಸ್, ಗೋಳಿ ಬಜೆ, ನೀರ್ ದೋಸೆಗಳನ್ನು ಸವಿಯದಿದ್ದರೆ ಕರಾವಳಿ ಜಿಲ್ಲೆಗಳ ಪ್ರವಾಸ ಪೂರ್ಣವಾಗದು ಎಂದು ಬರೆದುಕೊಂಡಿದ್ದಾರೆ.

0 تعليقات

إرسال تعليق

Post a Comment (0)

أحدث أقدم