ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರ ನ.25ಕ್ಕೆ ಬಿಡುಗಡೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರ ನ.25ಕ್ಕೆ ಬಿಡುಗಡೆ

 


ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಚಿತ್ರ ನ.25ರಂದು ಬಿಡುಗಡೆಗೆ ಸಜ್ಜಾಗಿದೆ.

ಮಹೇಶ್ ಗೌಡ ನಿರ್ದೇಶನ, ವೈ ಎಂ ರಾಮ್ಗೋಪಾಲ್ ನಿರ್ಮಾಣದ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.

ಗಾಳಿಪಟ 2’ ಚಿತ್ರದ ಯಶಸ್ಸಿನಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ‘ತ್ರಿಬಲ್ ರೈಡಿಂಗ್’ ಮತ್ತೊಂದು ಗೆಲವು ತಂದುಕೊಡುವ ಭರವಸೆ ಮೂಡಿಸಿದೆ.

ಆಡಿಯೋ ಬಿಡುಗಡೆ ಕೂಡ ಸಜ್ಜಾಗಿರುವ ಈ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಅದಿತಿಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ಅವರು ನಾಯಕಿಯರಾಗಿ ನಟಿಸಿದ್ದಾರೆ.

ರಾಮಗೋಪಾಲ್ ಅವರು ಬಂಡವಾಳ ಹೂಡಿರುವ 'ತ್ರಿಬಲ್ ರೈಡಿಂಗ್' ಚಿತ್ರಕ್ಕೆ ಸಾಯಿ ಕಾರ್ತೀಕ್ ಸಂಗೀತ ಸಂಯೋಜನೆ ಮತ್ತು ಜೈ ಆನಂದ್ ಛಾಯಾಗ್ರಹಣವಿದೆ.

0 تعليقات

إرسال تعليق

Post a Comment (0)

أحدث أقدم