ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿನಾಯಕ ದೇಗುಲದ ಆನೆ ಹೃದಯಾಘಾತದಿಂದ ನಿಧನ

ವಿನಾಯಕ ದೇಗುಲದ ಆನೆ ಹೃದಯಾಘಾತದಿಂದ ನಿಧನ

 


ಪುದುಚೇರಿ: ಇಲ್ಲಿನ ಪ್ರಸಿದ್ಧ ಮನಕುಲ ವಿನಾಯಕ ದೇಗುಲಕ್ಕೆ ಸೇರಿದ್ದ ಆನೆಯೊಂದು ಹೃದಯಾಘಾತದಿಂದ ಬುಧವಾರ ಮೃತಪಟ್ಟಿದೆ. ಈ ಆನೆಗೆ ಲಕ್ಷ್ಮಿ ಎಂದು ನಾಮಕರಣ ಮಾಡಲಾಗಿತ್ತು.


ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಆನೆ ವಿಹಾರ ಮಾಡುತ್ತಿದ್ದಾಗ ಹಠಾತ್ ಕುಸಿದು ಬಿದ್ದಿದೆ.


ಮಾಹಿತಿ ತಿಳಿದ ಪಶುವೈದ್ಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆನೆ ಮೃತಪಟ್ಟಿತ್ತು ಎಂದು ವಿನಾಯಕ ದೇಗುಲದ ಪ್ರಧಾನ ಆರ್ಚಕರು ಹೇಳಿದ್ದಾರೆ.


ಆನೆಗೆ ಯಾವುದೇ ಕಾಯಿಲೆಗಳು ಇರಲಿಲ್ಲ ಆದರೆ ಆನೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم