ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಲೆಯ ನರದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ವೇಷ ಧರಿಸಿ ಸಹಾಯ ಹಸ್ತ ನೀಡಿದ ಚುಕ್ಕಿ ವಿಟ್ಲ, ರವಿ ಬೆಳ್ಳಾರೆ, ನಾಗೇಶ್ ಬೆಳ್ಳಾರೆ

ತಲೆಯ ನರದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ವೇಷ ಧರಿಸಿ ಸಹಾಯ ಹಸ್ತ ನೀಡಿದ ಚುಕ್ಕಿ ವಿಟ್ಲ, ರವಿ ಬೆಳ್ಳಾರೆ, ನಾಗೇಶ್ ಬೆಳ್ಳಾರೆ

 


ಸುಳ್ಯ :  ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ) ಮಜ್ಜಾರಡ್ಕ ವತಿಯಿಂದ ನಡೆದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಚುಕ್ಕಿ ವಿಟ್ಲ , ರವಿ ಬೆಳ್ಳಾರೆ ಹಾಗೂ ನಾಗೇಶ್ ಬೆಳ್ಳಾರೆ ವಿಶೇಷ ವೇಷ ಧರಿಸಿ ಸಹಾಯ ಹಸ್ತಕ್ಕಾಗಿ ಡಬ್ಬ ಹಿಡಿದು ಹಣ ಸಂಗ್ರಹಣೆ ಮಾಡಿದರು.

ವಿಟ್ಲ ಮಡ್ನೂರು ಗ್ರಾಮದ ಬಂಟ್ವಾಳ ತಾಲೂಕಿನ ಕಂಬಳ ಬೆಟ್ಟು ನಿವಾಸಿ ದಿ.ವನರಾಜ ಹಾಗೂ ಲೀಲಾವತಿ ದಂಪತಿಯ ಪುತ್ರಿ ವರ್ಷಿನಿ 14 ವರ್ಷದ ಬಾಲಕಿ ತಲೆಯ ನರದ ತೊಂದರೆಯಿಂದ ಬಳಲುತ್ತಿದ್ದು, ಬಾಲಕಿಗೆ ಸಹಾಯವಾಗುವ ಉದ್ದೇಶ ದಿಂದ ವೇಷ ಧರಿಸಿ ಅದರಲ್ಲಿ ಬಂದ 20 ಸಾವಿರಕ್ಕೂ ಹೆಚ್ಚಿನ ಮೊತ್ತವನ್ನು ವರ್ಷಿನಿ ಅವರಿಗೆ ಚುಕ್ಕಿ ವಿಟ್ಲ ನಾಗೇಶ್ ಬೆಳ್ಳಾರೆ ಹಸ್ತಾಂತರ ಮಾಡಿದ್ದಾರೆ.

0 تعليقات

إرسال تعليق

Post a Comment (0)

أحدث أقدم