ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭೀಮರಾವ್ ವಾಷ್ಠರ್ ಅವರಿಗೆ ಹಿರಿಯ ಜೇಸಿಗಳ ಸಂಘದಿಂದ ಸನ್ಮಾನ

ಭೀಮರಾವ್ ವಾಷ್ಠರ್ ಅವರಿಗೆ ಹಿರಿಯ ಜೇಸಿಗಳ ಸಂಘದಿಂದ ಸನ್ಮಾನ

 


ಸುಳ್ಯ: ಪಯಸ್ವಿನಿ ಹಿರಿಯ ಜೇಸಿಗಳ ಸಂಘದ ವತಿಯಿಂದ  ಸುಳ್ಯದ ಸಾಹಿತಿ , ಜ್ಯೋತಿಷಿ ಮತ್ತು ಚಿತ್ರ ನಿರ್ದೇಶಕರಾದ ಹಿರಿಯ ಜೇಸಿ ಎಚ್ .ಭೀಮರಾವ್ ವಾಷ್ಠರ್ ಅವರಿಗೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆದ ಪಯಸ್ವಿನಿ  ಹಿರಿಯ ಜೇಸಿಗಳ ಮಾಸಿಕ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಸಾಹಿತ್ಯದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಹಿರಿಯ ಜೇಸಿಗಳ ಸಂಘದ ಅಧ್ಯಕ್ಷರಾದ ಜೇಸಿ ಪಿ ಎಸ್ ಗಂಗಾಧರ್ ಮತ್ತು ಎಂ ಬಿ ಫೌಂಡೇಶನ್ ಅಧ್ಯಕ್ಷರಾದ ಜೇಸಿ ಎಂ ಬಿ ಸದಾಶಿವ ರವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. 


ಈ ಸಂದರ್ಭದಲ್ಲಿ  ಜೇಸಿ ಎಸ್ ಆರ್ ಸೂರಯ್ಯ , ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಹಿರಿಯ ಜೇಸಿಗಳಾದ ಜೇಸಿ ಚಂದ್ರಶೇಖರ್ ಪೇರಾಲು , ಜೇಸಿ ಕೆ ಎಮ್ ಮುಸ್ತಫಾ, ಜೇಸಿ ದಿನೇಶ್ ಮಡಪ್ಪಾಡಿ , ಜೇಸಿ ದಿನೇಶ್ ಅಂಬೆಕಲ್ಲು ,ಜೇಸಿ ಕೆ ಟಿ ವಿಶ್ವನಾಥ್  , ಜೇಸಿಐ ಸುಳ್ಯ ಪಯಸ್ವಿನಿ ಘಟಕಸ ಅಧ್ಯಕ್ಷ ಜೇಸಿ ರಂಜಿತ್ ಕುಕ್ಕೆಟ್ಟಿ, ಜೇಸಿ ಲೋಕೇಶ್ ಪೆರ್ಲಂಪಾಡಿ ಇನ್ನಿತರರು ಉಪಸ್ಥಿತರಿದ್ದರು.


ನಂತರ ಸಾಹಿತಿ ಮತ್ತು ಗಾಯಕ ಭೀಮರಾವ್ ವಾಷ್ಠರ್ ರವರು ಕನ್ನಡ ರಾಜ್ಯೋತ್ಸವದ ಗೀತೆಗಳನ್ನು ಹಾಡಿದರು .

0 تعليقات

إرسال تعليق

Post a Comment (0)

أحدث أقدم