ಬೆಂಗಳೂರು: ಚಾಕು ತೋರಿಸಿ ಬೇಕರಿಯಲ್ಲಿ ಹಣ ದೋಚಿದ ಮೂವರನ್ನು ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೈಮನ್ ಗ್ಯಾಬ್ರಿಯಲ್, ಶೇಖ್ ಶಫಿ, ಸಿಕಂದರ್ ಬಂಧಿತ ಆರೋಪಿಗಳು ಎಂದು ಗುರುತಿಸ ಲಾಗಿದೆ. ಆರೋಪಿಗಳು, ಅ.9ರ ರಾತ್ರಿ ಅಶೋಕನಗರ ಠಾಣಾ ವ್ಯಾಪ್ತಿಯ ಬೇಕರಿಯಲ್ಲಿ ಮಾಲೀಕನಿಗೆ ಚಾಕು ತೋರಿಸಿ ನಗದು ದೋಚಿ ಎಸ್ಕೇಪ್ ಆಗಿದ್ದರು.
ಈ ಬಗ್ಗೆ ಬೇಕರಿ ಮಾಲೀಕ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ಆರೋಪಿಗಳ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق