ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಪ್ಪನ ಮೇಲಿನ ದ್ವೇಷಕ್ಕೆ 4ವರ್ಷದ ಕಂದನನ್ನು ಕೊಲೆ ಮಾಡಿದ ಪಾಪಿ

ಅಪ್ಪನ ಮೇಲಿನ ದ್ವೇಷಕ್ಕೆ 4ವರ್ಷದ ಕಂದನನ್ನು ಕೊಲೆ ಮಾಡಿದ ಪಾಪಿ

 


ವಯನಾಡ್​ (ಕೇರಳ): ಅಪ್ಪನ ಮೇಲಿನ ದ್ವೇಷಕ್ಕೆ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ.


ಕೇರಳದ ವಯನಾಡ್ ಜಿಲ್ಲೆಯ ಪೊಲೀಸರು ಕೊಲೆಗೆ ಸಂಬಂಧಿಸಿ ಜೀತೇಶ್​ ಎಂಬಾತನನ್ನು ಅರೆಸ್ಟ್​ ಮಾಡಿದ್ದಾರೆ.


ನಾಲ್ಕು ವರ್ಷದ ಆದಿ ದೇವ್​ನನ್ನು ಕೊಲೆ ಮಾಡಿರುವ ಆರೋಪಿ


ಬಾಲಕನ ತಾಯಿ ಅಂಗನವಾಡಿಗೆ ಕರೆದೊಯ್ಯುತ್ತಿದ್ದಾಗ ಇಬ್ಬರ ಮೇಲೆ ಜೀತೇಶ್​ ಹಲ್ಲೆ ನಡೆಸಿದ್ದಾನೆ.

ಘಟನೆಯಲ್ಲಿ ಬಾಲಕನ ಎಡ ಕಿವಿ ಮತ್ತು ತಲೆಯ ಬಳಿ ತೀವ್ರವಾಗಿ ಗಾಯವಾಗಿತ್ತು. ತಾಯಿಗೂ ತೀವ್ರ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟರೆ ತಾಯಿಗೆ ಚಿಕಿತ್ಸೆ ಮುಂದುವರೆದಿದೆ.


ಆರೋಪಿ ಜೀತೇಶ್​ ಹಾಗೂ ಬಾಲಕನ ತಂದೆ ಜಯಪ್ರಕಾಶ್ ವ್ಯಾಪಾರ ಪಾಲುದಾರರಾಗಿದ್ದರು.

ಇವರಿಬ್ಬರೂ ಕೊಚ್ಚಿಯಲ್ಲಿ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

0 Comments

Post a Comment

Post a Comment (0)

Previous Post Next Post