ಹಾಸನ: ಮನೆಯ ಮೇಲಿನ ಕೈತೋಟಕ್ಕೆ ಮೇಲ್ಚಾವಣಿ ಕಟ್ಟುವ ವೇಳೆ ವಿದ್ಯುತ್ ಅಘಾತದಿಂದ ಇಬ್ಬರು ಮೃತಪಟ್ಟಿದ್ದಾರೆ.
ಹಾಸನ ನಗರದ ದೊಡ್ಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಡಾ.ಶಾಂತರಾಮು (74), ಕಂದಲಿಯ ರಾಜ್‌ಕುಮಾರ್ (48) ಮೃತ ದುರ್ದೈವಿಗಳು.
ಕಂದಲಿಯಲ್ಲಿ ಖಾಸಗಿ ವೈದ್ಯರಾಗಿದ್ದ ಶಾಂತರಾಮ್ ಅವರು ಈಗ ಹಾಸನ ರಸ್ತೆಯಲ್ಲಿ ವಾಸಿಸುತ್ತಿದ್ದು,
ಅವರು ತಮ್ಮ ಮನೆಯ ಮೇಲಿದ್ದ ತೈತೋಟಕ್ಕೆ ಮೇಲ್ಚಾವಣಿ ಕಟ್ಟಲು ಮುಂದಾಗಿದ್ದರು.
ಅವರಿಬ್ಬರೂ ಮೇಲ್ಚಾವಣಿ ಕಟ್ಟುವ ವೇಳೆ ಅವರು ಬಳಸುತ್ತಿದ್ದ ಕಬ್ಬಿಣದ ರಾಡ್ ಒಂದು ವಿದ್ಯುತ್ ತಂತಿಗೆ ತಗುಲಿ ಶಾಕ್‌ಗೆ ಒಳಗಾದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆಯೊಂದು ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Post a Comment