ಬಾಯಾರು: ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಹೈಸ್ಕೂಲ್ ವಿಭಾಗದ ,ಶಾಲಾ ಕಲೋತ್ಸವಕ್ಕೆ ಸಂಭ್ರಮದ ಚಾಲನೆ ದೊರೆಯಿತು.ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ,ತುಳುನಾಡಿನ ಹೆಮ್ಮೆಯ ಸಾಂಸ್ಕೃತಿಕ ಕಲಾ ರೂಪ "ಹುಲಿವೇಷ ಕುಣಿತ"ವು ಕಲೋತ್ಸವಕ್ಕೆ ಮುನ್ನುಡಿಯನ್ನು ಬರೆಯಿತು.
ಸಮಾರಂಭದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ಎನ್ ಇವರು -" ಕಲೋತ್ಸವವು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಕಲಾಪ್ರತಿಭೆಯನ್ನು ಹೊರ ತರುವುದಕ್ಕೆ ಉತ್ತಮ ಮಾಧ್ಯಮವಾಗಿದೆ.ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳೂ ಇದನ್ನು ಅತ್ಯಂತ ಫಲಪ್ರದವಾಗಿ ಉಪಯೋಗಿಸಿಕೊಳ್ಳಬೇಕು" ಎಂದು ಕರೆ ನೀಡಿದರು.ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸರ್ಕಾರಿ.ಹಿ.ಪ್ರಾ.ಶಾ.ಕಾಸರಗೋಡು ಚಲನಚಿತ್ರ ಖ್ಯಾತಿಯ "ಯೋಗೀಶ್ ಶೆಟ್ಟಿ ಧರ್ಮೆಮಾರ್" ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ಮೂಡಿಸಿದರು."ಜೀವನದಲ್ಲಿ ನಾವು ಸ್ವಯಂ ಸವಾಲನ್ನು ಹಾಕಿಕೊಂಡು ,ಅದನ್ನು ಸ್ವೀಕರಿಸಿ ಗೆದ್ದು ನಿರೂಪಿಸಬೇಕು.ನಮ್ಮ ಹೋರಾಟ ನಮ್ಮ ನಿನ್ನೆಯೊಂದಿಗೆ ಆಗಿರಬೇಕು,ಹೊರತು ಪರರೊಂದಿಗಲ್ಲ.ಹಾಗಿದ್ದಾಗ ನಾವು ಸದಾ ಯಶಸ್ಸನ್ನು ಗಳಿಸಬಹುದು "ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಇದೇ ಸಂದರ್ಭ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಾಪಕ ಶಶಿಧರ ಕೆ,ಅತಿಥಿಯ ಕಿರುಪರಿಚಯವನ್ನು ವಾಚಿಸಿದರು.
ಮುಖ್ಯೋಪಾಧ್ಯಾಯ ಇ.ಎಚ್. ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜೋನ್ ಡಿಸೋಜ ಸಭಾಧ್ಯಕ್ಷತೆಯನ್ನು ವಹಿಸಿದರು. ಪಿ.ಟಿ.ಎ ಉಪಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲ್ ಶುಭ ಹಾರೈಸಿದರು. ಸ್ಟಾಫ್ ಸೆಕ್ರೆಟರಿ ರಾಮಕೃಷ್ಣ ಭಟ್,ಅಧ್ಯಾಪಿಕೆ ಶ್ರೀಮತಿ ಉಷಾ ಕೆ.ಆರ್, ಶ್ರೀಮತಿ ಶ್ರೀಜಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮದಲ್ಲಿ ಕಲೋತ್ಸವ ಕನ್ವೀನರ್ ಶ್ರೀಮತಿ ಸೌಮ್ಯ ಎಂ ಸ್ವಾಗತಿಸಿ, ಶ್ರೀಮತಿ ಈಶ್ವರಿ ವಂದಿಸಿದರು. ಪ್ರಶಾಂತ ಹೊಳ್ಳ ಎನ್ ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಿದಿನಗಳ ಕಲೋತ್ಸವ ವೇದಿಕೆಯು ಸರ್ವ ಅಧ್ಯಾಪಕ, ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗಾಗಿ ತೆರೆದುಕೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق