ಮಂಗಳೂರು: ಹಿರಿಯ ವೈದಿಕ ವಿದ್ವಾಂಸರಾದ ವೇದಮೂರ್ತಿ ಚೂಂತಾರು ಲಕ್ಷ್ಮೀನಾರಾಯಣ ಭಟ್ಟರು ಅಲ್ಪಕಾಲದ ಅನಾರೋಗ್ಯದ ನಂತರ ಇಂದು ಬೆಳಗ್ಗೆ (ಅ.14) ನಿಧನರಾದರು.
ವೈದಿಕ ವಿದ್ವಾಂಸರ ಪರಂಪರೆಯಲ್ಲಿ ಬಹಳಷ್ಟು ಖ್ಯಾತಿ ಗಳಿಸಿದ್ದ ಅವರು, ಮೂವರು ಪುತ್ರರು, ಓರ್ವ ಪುತ್ರಿ, ಬಂಧುವರ್ಗ ಹಾಗೂ ಅಪಾರ ಅಭಿಮಾನಿ ಶಿಷ್ಯವರ್ಗದವರನ್ನು ಅಗಲಿದ್ದಾರೆ,
ಅವರಿಗೆ 83 ವರ್ಷ ವಯಸ್ಸಾಗಿತ್ತು. ಮಂಗಳೂರಿನಲ್ಲಿ ಅವರ ದ್ವಿತೀಯ ಪುತ್ರ ಹಾಗೂ ಖ್ಯಾತ ದಂತ ವೈದ್ಯರಾದ ಡಾ. ಮುರಲೀ ಮೋಹನ ಚೂಂತಾರು ಅವರ ಜತೆಗೆ ವಾಸ್ತವ್ಯವಿದ್ದರು. ಹಿರಿಯ ಪುತ್ರ ಮಹೇಶ್ ಚೂಂತಾರು ಅವರು ತಂದೆಯವರ ವೈದಿಕ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಕೊನೆಯ ಪುತ್ರ ವಿದೇಶದಲ್ಲಿದ್ದಾರೆ. ಪುತ್ರಿ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಲಕ್ಷ್ಮೀನಾರಾಯಣ ಭಟ್ಟರ ಪತ್ನಿ ಶ್ರೀಮತಿ ಸರೋಜಿನಿ ಭಟ್ ಚೂಂತಾರು ಅವರು ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment