ಕಾಸರಗೊಡು: ಕಾಸರಗೋಡಿನ ವಕೀಲರ ಸಂಘದ ಕಾರ್ಯದರ್ಶಿಗಳಾದ ಅಡ್ವೊಕೇಟ್ ಪ್ರದೀಪ್ ರಾವ್ ಮೇಪೊಡು 2021 ರಲ್ಲಿ ಕಾಸರಗೋಡು ಜಿಲ್ಲಾ ಕಲೆಕ್ಟರ್ ಆಫೀಸಿನಲ್ಲಿ ಅವರ ಆತ್ಮ ರಕ್ಷಣೆಗೆ ರಿವಾಲ್ವರ್ ಲೈಸೆನ್ಸ್ ಗಾಗಿ ಅರ್ಜಿ ಸಮರ್ಪಿಸಿದ್ದರು. ಕಾಸರಗೋಡು ಜಿಲ್ಲಾ ಕಲೆಕ್ಟರ್ ಪೊಲೀಸ್, ತಹಸಿಲ್ದಾರ್ ಹಾಗೂ ಅರಣ್ಯ ಇಲಾಖೆಗೆ ಅರ್ಜಿದಾರರ ಅರ್ಜಿ ಬಗ್ಗೆ ರಿಪೋರ್ಟ್ ಸಮರ್ಪಿಸಲು ಆದೇಶಿಸಿದ್ದರು. ಜಿಲ್ಲಾ ಕಲೆಕ್ಟರ್ ಅರ್ಜಿದಾರರಾದ ನ್ಯಾಯವಾದಿಗೆ ಆಯುಧ ಹಾಗೂ ಮದ್ದು ಗುಂಡು ತರಬೇತಿಯನ್ನು ಪಡೆದು ಸರ್ಟಿಫಿಕೇಟ್ ಹಾಜರುಪಡಿಸಲು ಸೂಚಿಸಿದ್ದರು.
ಅರ್ಜಿದಾರರು ಈಗಾಗಲೇ ತಮ್ಮ ಕೃಷಿ ರಕ್ಷಣೆಗಾಗಿ ಬಂದೂಕನ್ನು ಹೊಂದಿರುವವರಾಗಿದ್ದದರಿಂದ ಆಯುಧ ಹಾಗೂ ಮದ್ದು ಗುಂಡು ತರಬೇತಿ ತಮಗೆ ಅಗತ್ಯವಿಲ್ಲ ಮಾತ್ರವಲ್ಲದೆ ಕಾನೂನಿನ ಪ್ರಕಾರ ಆಯುಧ ಲೈಸೆನ್ಸ್ ಹರ್ಜಿಯನ್ನು 60 ದಿವಸಗಳ ಒಳಗಾಗಿ ಜಿಲ್ಲಾಧಿಕಾರಿ ತೀರ್ಪು ಕಲ್ಪಿಸಲು ಬದ್ದರಾಗಿರುತಾರೆ ಎಂಬುದಾಗಿ ಜಿಲ್ಲಾ ಕಲೆಕ್ಟರ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಕಲಾಪದ ಸಂದರ್ಭದಲ್ಲಿ ಜಿಲ್ಲಾ ಕಲೆಕ್ಟರ್ ಹೈಕೋರ್ಟಿಗೆ ಅರ್ಜಿದಾರರ ಅರ್ಜಿಯ ಮೇಲೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ರಿಪೋರ್ಟ್ ದೊರೆತಿರುತ್ತದೆ ಆದರೆ ತಹಸಿಲ್ದಾರರ ರಿಪೋರ್ಟ್ ದೊರೆಯಬೇಕಷ್ಟೆ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದರು. ಅರ್ಜಿದಾರರ ಹಾಗೂ ಜಿಲ್ಲಾ ಕಲೆಕ್ಟರ್ ಪರ ವಾದವನ್ನು ಆಲಿಸಿದ ನ್ಯಾಯಾಲಯವು ತಹಸಿಲ್ದಾರರ ರಿಪೋರ್ಟ್ ಸಿಕ್ಕಿದ ಒಂದು ತಿಂಗಳ ಒಳಗಾಗಿ ಅರ್ಜಿದಾರರ ಹರ್ಜಿಗೆ ತೀರ್ಪು ನೀಡಬೇಕೆಂದು ಕಾಸರಗೋಡು ಜಿಲ್ಲಾ ಕಲೆಕ್ಟರಿಗೆ ಆದೇಶಿಸಿತ್ತು.
ತಹಸಿಲ್ದಾರರ ರಿಪೋರ್ಟ್ ದೊರಕಿ ಹೈಕೋರ್ಟಿನ ಆದೇಶದ ಪ್ರಕಾರ ಒಂದು ತಿಂಗಳ ಒಳಗಾಗಿ ಯಾವುದೇ ತೀರ್ಪನ್ನು ನೀಡದೆ ಇದ್ದದ್ದರಿಂದ ಅರ್ಜಿದಾರರಾದ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು ಜಿಲ್ಲಾ ಕಲೆಕ್ಟರ್ ಶ್ರೀಮತಿ ಸ್ವಾಗತ ರನ್ವೀರ್ ಚಂದ್ ಭಂಡಾರಿ ಅವರು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಅದಕ್ಕೆ ಹೈಕೋರ್ಟ್ ಅವರಿಗೆ ತಕ್ಕದಾದ ಶಿಕ್ಷೆಯನ್ನು ನೀಡಬೇಕೆಂದು ಹೈಕೋರ್ಟ್ ಅಲ್ಲಿ ಜಿಲ್ಲಾ ಕಲೆಕ್ಟರ್ ವಿರುದ್ಧ ಕಂಟೆಂಪ್ಟ್ ಆಫ್ ಹೈಕೋರ್ಟ್ ಆರ್ಡರ್ ಅರ್ಜಿ ಸಲ್ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment