ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿಯ ಚೊಚ್ಚಲ ಸಿನಿಮಾ ರಿಲೀಸ್ ಆಗುವ ಮೊದಲೇ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇದೀಗ ಹೊಸ ಬಿಟೌನ್ ಸ್ಟಾರ್ ನಟ ಟೈಗರ್ ಶ್ರಾಫ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ಮಾಣದ, ರೋಹಿತ್ ಧವನ್ ನಿರ್ದೇಶನದ ಸಿನಿಮಾದಲ್ಲಿ ಟೈಗರ್ ಶ್ರಾಫ್‌ಗೆ ನಾಯಕಿಯಾಗಿ ರಶ್ಮಿಕಾ ಸೆಲೆಕ್ಟ್ ಆಗಿದ್ದಾರೆ. ಭಿನ್ನ ಪಾತ್ರದ ಮೂಲಕ ರಂಜಿಸಲು ಕಿರಿಕ್ ಬ್ಯೂಟಿ ರಶ್ಮಿಕಾ ರೆಡಿಯಾಗಿದ್ದಾರೆ.
ಇನ್ನೂ ಬಾಲಿವುಡ್‌ನ ರಶ್ಮಿಕಾ ನಟನೆಯ ಮೊದಲ ಸಿನಿಮಾ ಇದೇ ಅಕ್ಟೋಬರ್ 7ಕ್ಕೆ `ಗುಡ್ ಬೈ' ತೆರೆಗೆ ಬರುತ್ತಿದೆ.
إرسال تعليق