ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದು ಮೈಸೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಆರಗ ಜ್ಞಾನೇಂದ್ರ

ಇಂದು ಮೈಸೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಆರಗ ಜ್ಞಾನೇಂದ್ರ

 


ಮೈಸೂರು : ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೈಸೂರು ಕೇಂದ್ರ ಕಾರಾಗೃಹಕ್ಕೆ ಇಂದು ಭೇಟಿ ನೀಡಿ ಕಾರಾಗೃಹದ ಸಿಬ್ಬಂದಿಗಳೇ ನಿರ್ವಹಿಸುವ ಕಾರಾಗೃಹದ ಎಫ್ ಎಂ ಬಾನುಲಿ ಕೇಂದ್ರವನ್ನು ವೀಕ್ಷಣೆ ಮಾಡಿದರು.

ಜಿಲ್ಲಾ ಪ್ರವಾಸದಲ್ಲಿರುವ ಆರಗ ಜ್ಞಾನೇಂದ್ರ ಅವರು ಕಾರಾಗೃಹಕ್ಕ ಭೇಟಿ ನೀಡಿದ್ದು, ಅಲ್ಲಿರುವ ಕೈಮಗ್ಗ ಘಟಕ, ಹೊಲಿಗೆ ತರಬೇತಿ ಘಟಕ ಸೇರಿದಂತೆ ಕೌಶಲ್ಯ ಅಭಿವೃದ್ಧಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಕೆಲಸ ನಿರ್ವಹಿಸುವ ಕೈದಿಗಳ ಜೊತೆ ಮಾತನಾಡಿದರು.

93 ವರ್ಷದ ಮಹಿಳಾ ಸಜಾ ಬಂಧಿ ಕೈದಿ ಸೇರಿದಂತೆ ಹಲವರಿಂದ ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾರಾಗೃಹದ ಅಧಿಕಾರಿ ದಿವ್ಯಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

0 تعليقات

إرسال تعليق

Post a Comment (0)

أحدث أقدم