ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಕಾಂತಾರ"ದ ಯಶಸ್ವಿಯ ಗುಟ್ಟೇನು? ಸರಳತೆ; ನಂಬಿಕೆ ಸಹಜತೆಯೆ ಗೆಲುವಿಗೆ ಸೇೂಪಾನ

'ಕಾಂತಾರ"ದ ಯಶಸ್ವಿಯ ಗುಟ್ಟೇನು? ಸರಳತೆ; ನಂಬಿಕೆ ಸಹಜತೆಯೆ ಗೆಲುವಿಗೆ ಸೇೂಪಾನ


ಒಂದು ಸಿನಿಮಾ ತಯಾರಿಸಿ ಅದನ್ನು ಜನರಿಗೆ ತಲುಪಿಸುವುದು ಸುಲಭದ ಮಾತಲ್ಲ. ಅದರಲ್ಲೂ ಒಂದು ಪ್ರಾದೇಶಿಕ ದೈವಾರಾಧನೆಯ ನಂಬಿಕೆಯನ್ನೇ ವಿಷಯವಾಗಿಟ್ಟು ಕೊಂಡು. ಚಿತ್ರ ಪ್ರಪಂಚವೇ ಕುತೂಹಲದಿಂದ ಕಲಾತ್ಮಕವಾಗಿ ನೇೂಡಿ ಸೈ ಅನ್ನಿಸುವ ತರದಲ್ಲಿ ನಮ್ಮ ಕರಾವಳಿಯ ಬದುಕು ಚಿತ್ರಾಂಗಣ ವಲಯದಲ್ಲಿ ಹೊಸ ಇತಿಹಾಸವನ್ನೆ ದಾಖಲಿಸಲು ಹೊರಟಿದೆ ಅಂದರೆ ಕುಂದಾಪುರದ ಕೆರಾಡಿ ರಿಷಬ್ ಶೆಟ್ಟಿ ಮತ್ತು ಅವರ ಇಡಿ ತಂಡಕ್ಕೆ ಜೈ.. ಅನ್ನಲೇ ಬೇಕಾಗಿದೆ.


ಅತ್ಯಂತ ಸೂಕ್ಷ್ಮತೆಯ ವಿಷಯದ ಮೇಲೆ ರೂಪಿತ ಗೊಂಡ" ಕಾಂತಾರ" ಜನ ಮಾನಸಕ್ಕೆ ಲಗ್ಗೆ ಹಾಕಲು ಯಶಸ್ವಿಯಾಗಿದೆ ಅಂದರೆ ಅದಕ್ಕೆ ಪ್ರಮುಖ ಕಾರಣ ಇಡಿ ಚಿತ್ರದ ಚಲನೆಯಲ್ಲಿ ಸರಳತೆ ಮತ್ತು ಸಹಜತೆಯೇ ಪ್ರಧಾನ ಪಾತ್ರ ವಹಿಸಿದೆ ಅನ್ನುವುದು ಸತ್ಯ. ಚಿತ್ರಕ್ಕೆ ಆಯ್ಕೆ ಮಾಡಿಕೊಂಡ ವಿಷಯಗಳು ಕೂಡ ಜನಮಾನಸಕ್ಕೆ ಮತ್ತು ಬದುಕಿಗೆ ತೀರ ಹತ್ತಿರದ ವಸ್ತುಗಳು.. ಮಾತ್ರವಲ್ಲ ಅತ್ಯಂತ ಸುಾಕ್ಷತೆಯ ಪ್ರಸಂಗಳು ಎಲ್ಲಿಯಾದರು ಸ್ವಲ್ಪ ಪೆನ್ನು ಜಾರಿದರು ಕಾಣದಷ್ಟು ಪ್ರಪಾತಕ್ಕೆಬೀಳುವಷ್ಟು ಸೂಕ್ಷ್ಮತೆಯ ವಿಷಯ ಅನ್ನುವುದು ಕಾಂತರದ ಇಡಿ ತಂಡಕ್ಕೆ ಮೊದಲೇ ಮನವರಿಕೆ ಯಾಗಿತ್ತು ಅನ್ನುವುದು ರಿಷಬ್ ಶೆಟ್ಟಿ ಅವರ ಮಾತಿನಲ್ಲಿ ಗೊತ್ತಾಗುತಿತ್ತು.ಹಾಗಾಗಿ ಜನರ ನಂಬಿಗೆ ಆಚರಣೆಗಳಿಗೆ ಎಳ್ಳಷ್ಟೂ ಚ್ಯುತಿ ಬಾರದ ತರದಲ್ಲಿ ಕಾಯಾ ವಾಚಾ ಮನಸ್ಸು  ಚಿತ್ರದ ಮೊದಲು ಅನಂತರದಲ್ಲಿ ಕಾಪಾಡಿಕೊಂಡಿದ್ದರು.ಆದುದರಿಂದಲೇ ಇದನ್ನು ವಿರೇೂಧಿಸುವರು ಕೂಡ ನೂರು ಬಾರಿ ಆಲೇೂಚಿಸುವ ತರದಲ್ಲಿ ಮನೇೂ ಭೂಮಿಕೆಸಜ್ಜುಗೊಳಿಸಿಕೊಂಡಿದ್ದರು ಅನ್ನುವುದು ಅಷ್ಟೇ ಸತ್ಯ.


ಪ್ರತಿಯೊಂದು ಪಾತ್ರದಲ್ಲೂ ಕರಾವಳಿಯ ಅದರಲ್ಲೂ ಕುಂದಾಪುರ ಕಡೆಯ ಬದುಕಿನ ಸೊಗಡು ಎದ್ದು ಕಾಣುವಂತಿತ್ತು. ಹಾಗಾಗಿ ಕರಾವಳಿಯ ಬದುಕಿಗೆ ಹಿಡಿದ ಕೈ ಗನ್ನಡಿಯಂತಿದೆ ಅನ್ನುವುದು ಎಲ್ಲಾ ಚಿತ್ರ ವೀಕ್ಷಕರ ಸಹಮತ ಕೂಡಾ. ಮಾತ್ರವಲ್ಲ ಎಲ್ಲಾ ವಯೇೂಮಾನದವರನ್ನು ಒಮ್ಮೆ"ಕಾಂತಾರ" ನೇೂಡಬೇಕಪ್ಪಾ ಅನ್ನುವ ಕಾತುರತೆಯ ಮನಸ್ಸನ್ನು ಹುಟ್ಟಿಸಿದಂತೂ ನಿಜ. ಹಾಗಾಗಿ ಹಳ್ಳಿಯಿಂದ  ಹಿಡಿದು ಡಿಲ್ಲಿಯ ತನಕ ಅಲ್ಲಿಂದ ಸಾಗರದಾಚೆಗೂ ಕಾಂತಾರ ಕಾಂಬವರ ಕಣ್ಣನ್ನು ಸೆಳೆದಿದೆ.


ಯಾವುದೇ ಒಂದು ಕೃತಿಯಾಗಲಿ ಕತೆಯಾಗಲಿ ವ್ಯಕ್ತಿಯಾಗಲಿ ಸ್ವಲ್ಪ ಮಟ್ಟಿಗೆ ಟೀಕೆಗೊ ಚಚೆ೯ಗೂ ಒಳಪಡ ಬೇಕು ಆಗ ಮಾತ್ರ ಅದಕ್ಕೊಂದು "ಜೇೂಶ್‌" ಬರುವುದು.. ಕಾಂತಾರಕ್ಕೂ ಕೂಡಾ ಈ ಆಕಷ೯ಣೆಯ" ಜೇೂಶ್" ದೈವ ಸಂಕಲ್ಪದ ತರದಲ್ಲಿ ವರವಾಗಿ ಬಂದಿದೆ.ಇದರ ಜೊತೆ ಜೊತೆಗೆ ಮಾಧ್ಯಮ ಸಾಮಾಜಿಕ ಜಾಲತಾಣ... ಕಾಂತಾರ ಪುರ ಮೆರವಣಿಗೆ.. ಅದಕ್ಕೂ ಮಿಗಿಲಾಗಿ ಇಡಿ ಚಿತ್ರ ತಂಡಕ್ಕೆ ಅಭಿಮಾನಿಗಳ ಹೃದಯ ತುಂಬಿ ಹರಸಿದ ಪ್ರೀತಿ.. ಜಾತಿ ಧಮ೯ ಪ್ರಾದೇಶಿಕತೆಯ ಗಡಿಧಾಟಿ ಹರಿದು ಬಂದ ಪ್ರೀತಿಯ ಸೆಲೆ "ಕಾಂತಾರ" ಚಿತ್ರದ ಯಶಸ್ವಿನ ಗುಟ್ಟು ಅನ್ನುವುದು ಈಗ ರಟ್ಟಾಗಿರುವುದಂತೂ ಸತ್ಯ

- ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 تعليقات

إرسال تعليق

Post a Comment (0)

أحدث أقدم