ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 1ವರ್ಷದಲ್ಲಿ 3 ಬಾರಿ ಭರ್ತಿಯಾದ ಕೆಆರ್ ಎಸ್ ಜಲಾಶಯ

1ವರ್ಷದಲ್ಲಿ 3 ಬಾರಿ ಭರ್ತಿಯಾದ ಕೆಆರ್ ಎಸ್ ಜಲಾಶಯ

 


ಮಂಡ್ಯ: 1 ವರ್ಷದ ಅವಧಿಯಲ್ಲಿ ಹಳೆ ಮೈಸೂರು ಭಾಗದ ಜೀವನಾಡಿಯಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯ 3 ಬಾರಿ ಭರ್ತಿಯಾಗುವ ಮೂಲಕ ದಾಖಲೆ ಬರೆದಿದೆ.


 ಕಾವೇರಿ ಜಲಾಶಯದ ಪ್ರದೇಶ ದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಕಳೆದ 4-5 ದಿನಗಳಿಂದ ಹೆಚ್ಚಳವಾಗಿದೆ.


ಈ ವರ್ಷ ಜುಲೈ, ಸೆಪ್ಟೆಂಬರ್ ಹಾಗೂ ಇದೀಗ ಅಕ್ಟೋಬರ್ ತಿಂಗಳಿನಲ್ಲಿ ಕೆಆರ್‌ಎಸ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. 

124.80 ಗರಿಷ್ಠ ಅಡಿಗಳಿರುವ ಕೆಆರ್‌ಎಸ್ ಡ್ಯಾಂ ಅಷ್ಟೇ ಅಡಿಗಳಷ್ಟು ತುಂಬಿ ಭರ್ತಿಯಾಗಿದೆ.


 ಒಳಹರಿವಿನ ಪ್ರಮಾಣ 36,733 ಕ್ಯೂಸೆಕ್ ಇದ್ದು, ಹೊರ ಹರಿವಿನ ಪ್ರಮಾಣ 33,633 ಕ್ಯೂಸೆಕ್ ಇದೆ. ಕೆಆರ್‌ಎಸ್ ಡ್ಯಾಂ 49.452 ಟಿಎಂಸಿ ಗರಿಷ್ಠ ಸಂಗ್ರಹದ ಸಾಮರ್ಥ್ಯವಿದ್ದು, ಸಂಪೂರ್ಣವಾಗಿ 49.452 ಟಿಎಂಸಿ ನೀರು ಭರ್ತಿಯಾಗಿದೆ.


0 تعليقات

إرسال تعليق

Post a Comment (0)

أحدث أقدم