ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯದ ಕಲಾವಿದರು ಬೆಂಗಳೂರಲ್ಲಿ ನಡೆಯುವ ಚಲನಚಿತ್ರ ಶೂಟಿಂಗ್‌ನಲ್ಲಿ ಭಾಗಿ

ಸುಳ್ಯದ ಕಲಾವಿದರು ಬೆಂಗಳೂರಲ್ಲಿ ನಡೆಯುವ ಚಲನಚಿತ್ರ ಶೂಟಿಂಗ್‌ನಲ್ಲಿ ಭಾಗಿ


ಬೆಂಗಳೂರಿನ ದೃಷ್ಟಿ ಮೀಡಿಯಾ ನಿರ್ಮಾಣದ ಸುಳ್ಯದ ಹೆಮ್ಮೆಯ ನಿರ್ದೇಶಕ ಸಂತೋಷ್ ಕೋಡಂಕೇರಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ ಪ್ರೊಡಕ್ಷನ್ ನಂಬರ್- 2 ಚಲನಚಿತ್ರದ ಎರಡನೇ ಹಂತದ  ಚಿತ್ರೀಕರಣದಲ್ಲಿ ಸುಳ್ಯದ ಕಲಾವಿದರು ನಟಿಸುತ್ತಿದ್ದಾರೆ.


ಬೆಂಗಳೂರಿನ ಹೆಸರಾಂತ ಕಂಠಿರವ ಸ್ಟುಡಿಯೋದಲ್ಲಿ ಬಿರುಸಿನಿಂದ ಚಿತ್ರೀಕರಣ ನಡೆಯುತ್ತಿದೆ. ನಟ ನಿರ್ದೇಶಕ ಮತ್ತು ಜ್ಯೋತಿಷ್ಯರಾದ ಎಚ್. ಭೀಮರಾವ್ ವಾಷ್ಠರ್, ತಿರುಮಲೇಶ್ವರಿ ಅರ್ಬಡ್ಕ ಜಾಲ್ಸೂರು, ಸುಮತಿ ನಾಯಕ್ ಸುಳ್ಯ, ಹರ್ಷಿತ್ ಕೆ ಸುಳ್ಯ, ರಜಾಕ್ ಸುಳ್ಯ, ದರ್ಶನ್ ಸುಳ್ಯ ಶೂಟಿಂಗಲ್ಲಿ ಭಾಗವಹಿಸಿದ್ದರು. ಚಿತ್ರದ ಕಥೆ ಬರೆದ ಪಾವನ ಸಂತೋಷ್ ಸುಳ್ಯ ರವರು ಕೂಡ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post