ಸುಳ್ಯ: ಖ್ಯಾತ ಜ್ಯೋತಿಷಿ, ಸಾಹಿತಿ, ಚಿತ್ರನಿರ್ದೇಶಕ, ಗಾಯಕ, ಚಿತ್ರನಟ, ಸಂಘಟಕರಾದ ಎಚ್. ಭೀಮರಾವ್ ವಾಷ್ಠರ್ ರವರು 2022 ನೇ ಸಾಲಿನ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಆಯ್ಕೆ ಆಗಿದ್ದಾರೆ.
ಸತತವಾಗಿ 12 ವರ್ಷಗಳಿಂದ ಮಡಿಕೇರಿ ದಸರಾ ಕವಿಗೋಷ್ಠಿಯಲ್ಲಿ ಲೋಕಾಚ ರೀತ ರಿವಾಜ್ ಎಂಬ ಮರಾಠಿ ಕವನ ವಾಚನ ಮಾಡುತ್ತಲೇ ಬಂದಿದ್ದಾರೆ. ಮಡಿಕೇರಿಯ ಗಾಂಧೀ ಮೈದಾನದ ಕಲಾ ಸಂಭ್ರಮ ಬೃಹತ್ ಸಭಾಂಗಣದಲ್ಲಿ ಈ ಕವಿಗೋಷ್ಠಿ ನಡೆಯಲಿದೆ ಎಂದು ದಸರಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಡೆಕಲ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
إرسال تعليق