ಕೋಟಿಗಟ್ಟಲೆ ಜನಸಂಖ್ಯೆ ಇರುವ ನಮ್ಮ ಈ ಭಾರತದೇಶದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರದ್ದೇ ಎತ್ತಿದ ಕೈ. ಮಹಿಳೆಯರು ಕಾಣಸಿಗದ ಕ್ಷೇತ್ರವೇ ವಿರಳವಾಗಿದೆ. ಇತ್ತೀಚೆಗಷ್ಟೇ ಅಂದರೆ 2020 ರ ವೇಳೆಗೆ ಕೇರಳದಲ್ಲಿ ಒಬ್ಬರು ಮಹಿಳೆ ತನ್ನ ಕನಸನ್ನು ಸಾಧಿಸಿ ಬಸ್ಸು ಚಾಲಕಿಯಾಗಿ ಕಂಡುಕೊಂಡದ್ದು ಬಹಳ ಪ್ರಚಾರ ಗಿಟ್ಟಿಸಿದ ವಿಷಯ. ಮಹಿಳೆಯರು ಎಲ್ಲದಕ್ಕೂ ಸೈ ಎಂದು ಈ ಸುದ್ದಿ ನೋಡಿಯೇ ತಿಳಿದುಕೊಳ್ಳಬಹುದು.
"ಸಾಧಿಸಿದರೆ ಸಬಳವನ್ನೂ ನುಂಗಬಹುದು" ಎಂಬ ಮಾತಿನಂತೆ ನಮ್ಮಲ್ಲಿ ಸಾಧನೆ ಹಾಗೂ ಮನಸ್ಸು ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಎಂಬುದು ಈ ಮಾತಿನ ಅರ್ಥ ಆದ್ದರಿಂದ ಜೀವನದಲ್ಲಿ ಸಾಧನೆ ಎಂಬುದು ಮುಖ್ಯ ಎಂಬುದು ಈ ಮಾತಿನಲ್ಲಿ ತಿಳಿಯುತ್ತದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡವರು. ನಮ್ಮ ಭಾರತ ದೇಶದಲ್ಲಿ ಹೆಣ್ಣನ್ನು ದೇವತೆಗೆ ಹೋಲಿಸಲಾಗಿದೆ. ನಾವು ಇತ್ತೀಚೆಗೆ ನೋಡುವುದಾದರೆ ಹೆಣ್ಣುಮಕ್ಕಳು ಗಂಡಸರನ್ನು ಮೀರಿ ಬೆಳೆಯುತ್ತಿದ್ದಾರೆ. ಹಲವಾರು ಕ್ಷೇತ್ರದಲ್ಲಿ ಮಹಿಳೆಯರು ಮಿಂಚುತ್ತಿದ್ದಾರೆ. ಟಿ ವಿ ಮಾಧ್ಯಮಗಳಲ್ಲಿ ವಾರ್ತಾವಾಚರಾಗಿ, ಪತ್ರಕರ್ತರಾಗಿ, ಸ್ಟುಡಿಯೋದಲ್ಲಿ ಛಾಯಾಗ್ರಾಹಕರಾಗಿ ಮಹಿಳೆಯರಿದ್ದಾರೆ.
1. ಕಲ್ಪನಾ ಚಾವ್ಲ ಮೊದಲ ಭಾರತ ಸಂಜಾತ ಮಹಿಳಾ ಗಗನಯಾತ್ರಿ.
2. ವಿವಿಧತೆಯಲ್ಲಿ ಏಕತೆಯನ್ನು ಕಂಡ ಭಾರತದಂಥ ದೇಶದ ಆಳ್ವಿಕೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಇಂಥಾ ಸಾರ್ವಭೌಮ ದೇಶದ ಪ್ರಪ್ರಥಮ ಮಹಿಳಾ ಪ್ರಧಾನ ಮಂತ್ರಿ, ಅಷ್ಟೇ ಅಲ್ಲದೇ ತನ್ನ ತಂದೆಯ ನಂತರ ಅತಿಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಾಯಕಿ ಇಂದಿರಾ ಗಾಂಧಿ.
3. ಭಾರತದ ಈಗಿನ ರಾಷ್ಟ್ರಪತಿ ಕೂಡ ಮಹಿಳೆಯೇ ಆಗಿದ್ದಾರೆ.
ಮಿಲಿಟ್ರಿ, ಏರ್ಫೋರ್ಸ್, ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರೇ ಇದ್ದಾರೆ. ಬಾಲ್ಯ ವಿವಾಹವೂ ಕೂಡಾ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಮತ್ತು ಮಹಿಳಾ ಸಾಕ್ಷರತೆಯು ಕೂಡಾ ಅಧಿಕವಾಗುತ್ತಿದೆ. ಗಂಡು ಮೆಟ್ಟಿನ ಕಲೆ ಎಂದು ಹೆಸರುವಾಸಿಯಾದ ಯಕ್ಷಗಾನ ಕ್ಷೇತ್ರದಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ಆರೋಗ್ಯ ಪ್ರವರ್ತಕರಾಗಿಯೂ ಮಹಿಳೆಯರಿದ್ದಾರೆ.
- ಕಾರ್ತಿಕ್ ಕುಮಾರ್ ಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق