ಉಡುಪಿ: ಉಡುಪಿಯ ಸಂಗೀತ ವಿದುಷಿ, ಅಪೂರ್ವ ಚಿತ್ರಕಲಾವಿದೆ, (ಪ್ರೊ. ವಿ. ಅರವಿಂದ ಹೆಬ್ಬಾರರ ಧರ್ಮಪತ್ನಿ) ಶ್ರೀಮತಿ ವಸಂತ ಲಕ್ಷ್ಮೀ ಹೆಬ್ಬಾರ್ (61 ವರ್ಷ) ಅಲ್ಪಕಾಲದ ಅಸ್ವಾಸ್ಥ್ತದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬುಧವಾರ ನಿಧನಹೊಂದಿದರು.
ಇಂದ್ರಾಳಿಯಲ್ಲಿ ಲತಾಂಗಿ ಸಂಗೀತ ಶಾಲೆಯ ಮೂಲಕ ನೂರಾರು ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಧಾರೆಯೆರೆದಿದ್ದ ವಸಂತಲಕ್ಷ್ಮೀಯವರು, ನಾಡಿನ ಅನೇಕ ಪ್ರಸಿದ್ಧ ವೇದಿಕೆಗಳಲ್ಲಿ ಸಂಗೀತ ಕಚೇರಿಯನ್ನೂ ನೀಡಿದ್ದರು.
ಅಪೂರ್ವ ತೈಲಚಿತ್ರ ಕಲಾವಿದೆಯೂ ಆಗಿದ್ದರು. ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಸುಬ್ಬುಲಕ್ಷ್ಮೀ, ಸೇರಿದಂತೆ ನೂರಾರು ಪ್ರಸಿದ್ಧ ಕಲಾವಿದರ ಸಾಧಕರ ತೈಲವರ್ಣ ಚಿತ್ರಗಳನ್ನು ರಚಿಸಿದ್ದರು. ಆದರೆ ಅವರ ಈ ಪ್ರತಿಭೆ ಬೆಳಕಿಗೆ ಬರದೇ ಹೋದದ್ದು ಬೇಸರದ ಸಂಗತಿ. ವಸಂತಲಕ್ಷ್ಮೀಯವರ ಸುಪುತ್ರಿ ಪ್ರಸಿದ್ಧ ಯುವ ಸಂಗೀತ ಕಲಾವಿದೆ ಎಳೆಯ ಪ್ರಾಯದಲ್ಲೆ ಅಪೂರ್ವ ಸಾಧನೆಗೈದು ಅಗಲಿದ ದಿವಂಗತ ರಂಜನಿ ಹೆಬ್ಬಾರ್.
ವಸಂತಲಕ್ಷ್ಮೀಯವರು ಇತ್ತೀಚೆಗಷ್ಟೆ ನರೇಂದ್ರ ಮೋದಿಯವರ ಸುಂದರ ಚಿತ್ರ ಬಿಡಿಸಿ ಪೇಜಾವರ ಶ್ರೀಗಳ ಮೂಲಕ ಉಡುಗೊರೆಯಾಗಿ ಪ್ರಧಾನಿಯವರಿಗೆ ಕಳಿಸಿದ್ದರು.
ಮೃತರು ಪತಿ ಶ್ರೀ ಅರವಿಂದ ಹೆಬ್ಬಾರ್ ಹಾಗೂ ಓರ್ವ ಪುತ್ರ ಹಾಗೂ ಅಪಾರ ಶಿಷ್ಯರು ಅಭಿಮಾನಿಗಳನ್ನು ಅಗಲಿದ್ದಾರೆ.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಸಂತಲಕ್ಷ್ಮೀ ಹೆಬ್ಬಾರರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸುವಂತೆ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
******
ವಸಂತಲಕ್ಷ್ಮೀಯವರು ರಚಿಸಿದ ಕೊನೆಯ ತೈಲವರ್ಣ ಚಿತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರದ್ದು. ಇದನ್ನು ಪೇಜಾವರ ಶ್ರೀಗಳ ಮೂಲಕ ಮೋದಿಯವರಿಗೆ ಉಡುಗೊರೆಯಾಗಿ ಕಳಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق