ತಿರುಪತಿ: ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವರ ನವೆಂಬರ್ ತಿಂಗಳ ದರ್ಶನಕ್ಕೆ ಬುಧವಾರದಿಂದ ಬುಕಿಂಗ್ ಆರಂಭವಾಗಲಿದೆ.
300 ರೂ. ಕೊಟ್ಟು ವಿಶೇಷ ದರ್ಶನಕ್ಕೆ ತೆರಳಲಿಚ್ಛಿಸುವ ಭಕ್ತರು ಬೆಳಗ್ಗೆ 9 ಗಂಟೆಯಿಂದ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಹಾಗೆ ಶ್ರೀವಾರಿ ಅರ್ಜಿತ ಸೇವಾ ಟಿಕೆಟ್‌ಗಳನ್ನು ಮಧ್ಯಾಹ್ನ 3 ಗಂಟೆ ನಂತರ ಬುಕ್ ಮಾಡಬಹುದು.
ಶ್ರೀವಾರಿ ಸೇವಾ ಎಲೆಕ್ಟ್ರಾನಿಕ್ ಡಿಐಪಿ ನೋಂದಣಿಯನ್ನು ಸೆ.21ರ ಬೆಳಗ್ಗೆ 10 ಗಂಟೆಯಿಂದ ಸೆ.23ರ ಬೆಳಗ್ಗೆ 10 ಗಂಟೆಯೊಳಗೆ ಮಾಡಿಕೊಳ್ಳಬಹುದು.
ತಿರುಪತಿಯಲ್ಲಿ ವಸತಿ ಬುಕಿಂಗ್ ಮಾಡುವವರು ಸೆ.26ರ ಬೆಳಗ್ಗೆ 9 ಗಂಟೆಯಿಂದ ಬುಕಿಂಗ್ ಮಾಡಬಹುದು.
ಜೊತೆಗೆ ಅಕ್ಟೋಬರ್ ತಿಂಗಳ ತಿರುಮಲ ಅಂಗಪ್ರದಕ್ಷಣಮ್‌ಗೆ ಬುಕಿಂಗ್ ಮಾಡುವವರು ಸೆ.22ರ ಬೆಳಗ್ಗೆ 9 ಗಂಟೆಯಿಂದ ಬುಕಿಂಗ್ ಮಾಡಿಕೊಳ್ಳಬಹುದು ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.
إرسال تعليق